ಬಳಂಜ: ಆಯುಷ್ಮಾನ್ ಕಾರ್ಡ್ ನೋಂದಾವಣೆ ಹಾಗೂ ವಿತರಣಾ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬಳಂಜ : ಇಕೋ ಫ್ರೆಶ್ ಎಂಟರ್ ಪ್ರೈಸಸ್ ಬೆಳ್ತಂಗಡಿ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬಳಂಜ ಇವರ ಸಹಕಾರದೊಂದಿಗೆ ಆಯುಷ್ಮಾನ್ ಕಾರ್ಡ್ ನೋಂದಾವಣೆ ಹಾಗೂ ವಿತರಣೆ ಕಾರ್ಯಕ್ರಮವು ಬಳಂಜ ಶಾಲಾ ವಠಾರದಲ್ಲಿ ನಡೆಸಲಾಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಗುರುವಾಯನಕೆರೆ ಯೋಜನಾ ಕಛೇರಿಯ ಯೋಜನಾಧಿಕಾರಿ ಯಶವಂತ್ .ಎಸ್ ರವರು ನೆರವೇರಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಇಕೋ ಪ್ರೆಸ್ ಎಂಟರ್ ಪ್ರೈಸಸ್ ಬೆಳ್ತಂಗಡಿ ಇದರ ಮಾಲಕ ರಾಕೇಶ್ ಹೆಗ್ಡೆ,ಗ್ರಾಮ ಪಂಚಾಯತ್ ಮಾಜಿ ಸದಸ್ಯ ಯಶೋಧರ್ ಶೆಟ್ಟಿ ಅಟ್ಲಾಜೆ, ಬಳಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯ ವಿಲ್ಫ್ರೆಡ್ ಪಿಂಟೋ, ಬಳಂಜ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ .ಪಿ ಕೋಟ್ಯಾನ್ ಬಳಂಜ, ಒಕ್ಕೂಟ ಅಧ್ಯಕ್ಷ ರುಗಳಾದ ಡಿಕಯ್ಯ ಕೆ ಮತ್ತು ಪ್ರಮೋದ್ ದೇವಾಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೃಷಿ ಮೇಲ್ವಿಚಾರಕರಾದ ಬಾಸ್ಕರ್ ನಿರೂಪಿಸಿದರು,ಸೇವಾ ಪ್ರತಿನಿಧಿ ಸಂಜೀವ ಹಾಗೂ ಪ್ರಮೀಳಾರವರು ಸಹಕರಿಸಿದರು. ಸದಾನಂದ .ಪಿ ಸಾಲ್ಯಾನ್ ಸ್ವಾಗತಿಸಿ,ಪ್ರಮೋದ್ ಬಿ.ಎಸ್ ವಂದಿಸಿದರು,
ಬಳಂಜ ,ನಾಲ್ಕೂರು, ತೆಂಕಕಾರಂದೂರು ಗ್ರಾಮದ ಹಲವಾರು ಮಂದಿ ಆಯುಸ್ಮಾನ್ ಕಾರ್ಡ್ ಪಡೆದರು. ಈ ಸಂದರ್ಭದಲ್ಲಿ ಆಯುಷ್ಮಾನ್ ಕಾರ್ಡ್ ಉಚಿತ ವಾಗಿ ವಿತರಣೆಗೆ ಸಹಕಾರ ನೀಡಿದ ಇಕೋ ಪ್ರೆಶ್ ಎಂಟರ್ ಪ್ರೈಸಸ್ ಮಾಲಕ ರಾಕೇಶ್ ಹೆಗ್ಡೆ, ಗ್ರಾ.ಪಂ ಮಾಜಿ ಸದಸ್ಯ ಯಶೋಧರ್ ,ಪ್ರಗತಿಪರ ಕೃಷಿಕ ವಿಶ್ವನಾಥ್ ಹೊಳ್ಳರವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.