ಕುತ್ಲೂರು: 30 ಕುಟುಂಬಗಳಿಗೆ ಕೃಷಿ ಗಿಡ ಹಾಗೂ ಸಾಮಾಗ್ರಿ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕುತ್ಲೂರು: ಕುಕ್ಕುಜೆ ಶ್ರೀ ದೇವಿ ಕೃಪಾ ದಲ್ಲಿ ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿ ಇಂಡಿಯಾ (WCS) ಮತ್ತು ರಾಯಲ್ ಬ್ಯಾಂಕ್ ಸ್ಕಾಟ್ಲ್ಯಾಂಡ್ (RBS) ನೇತೃತ್ವದಲ್ಲಿ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜರವರು ಕೃಷಿಗೆ ಸಂಬಂಧಪಟ್ಟ ಪರಿಕರಗಳನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿದ ಸುಮಾರು 30 ಕುಟುಂಬಗಳಿಗೆ  4000 ಅಡಿಕೆ ಗಿಡ, 2000 ಕಾಳುಮೆಣಸು ಗಿಡ, 100 ತೆಂಗಿನ ಗಿಡ, 10 ಸ್ಪ್ರೇಯರನ್ನೂ,  ಸೆ. 17ರಂದು ವಿತರಿಸಿದರು.

ಕುತ್ಲೂರು ಮರಿಯಣ್ಣ ಹೆಗ್ಡೆಯವರಿಗೆ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಮಂಜೂರುಗೊಂಡ ತ್ರಿಚಕ್ರ ವಾಹನವನ್ನು, ಹಾಗೂ ಕುತ್ಲೂರು ಪದ್ಮ ಜ್ಯೋತಿ ಮಹಿಳಾ ಸ್ವಸಹಾಯ ಸಂಘಕ್ಕೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಮಂಜೂರು ಗೊಂಡ 3. 50 ಲಕ್ಷ ಸಾಲದ ಮಂಜೂರು ಪತ್ರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿದ ಕುಟುಂಬಗಳಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ, ಹಾಗೂ WCS ಸಂಸ್ಥೆಯ ಸೇವೆ ತುಂಬಾ ಶ್ಲಾಘನೀಯ, ಮತ್ತು ಕೆ ರಾಮಚಂದ್ರ ಭಟ್ ರವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇನ್ನು ಮುಂದೆಯೂ ನಾನು ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು. ಹಾಗೂ ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ವೇದಿಕೆಯಲ್ಲಿ ಅಳದಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸದಾನಂದ ಉಂಗಿಲ ಬೈಲು, ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರುಗಳಾದ ಉದಯ ಹೆಗ್ಡೆ, ರಾಜವರ್ಮ ಜೈನ್, ಪ್ರಮೀಳಾ ಆರ್ ಭಟ್, ರಾಧಾಕೃಷ್ಣ ಹೆಗ್ಡೆ, ಉಮಾಕಾಂತ ಆರಿಗ, ಡಾಕಯ್ಯ ಪೂಜಾರಿ, ಅರುಣ್ ಕುಮಾರ್, ರತ್ನಾಕರ ಪೂಜಾರಿ, ರಾಜೇಂದ್ರಕುಮಾರ್, ಜಗತ್ಪಾಲ ಜೈನ್, ಅರುಣ ಹೆಗ್ಡೆ, ರವೀಶ್ ಕುತ್ಲೂರು, ರಾಜಶ್ರೀ, ವಸಂತ ಶಿವಾಂಜಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ರೂವಾರಿ ಕೆ. ರಾಮಚಂದ್ರ ಭಟ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಗಣೇಶ್ ಹೆಗ್ಡೆಯವರು ಪ್ರಾರ್ಥನೆ ಮಾಡಿದರು, ವಸಂತ ಆಚಾರ್ಯರವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದವನ್ನಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.