ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ವೆಬಿನಾರ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು: ಸಮಕಾಲೀನ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಸಮಗ್ರ ವಿಶ್ಲೇಷಣೆ’ ಕುರಿತ ಅಂತರಾಷ್ಟ್ರೀಯ ವೆಬಿನಾರನ್ನು ಸೆ.15 ರಂದು ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಇದರ ಇಂಗ್ಲಿಷ್ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಭಾಗಿತ್ವದೊಂದಿಗೆ ನಡೆಯಿತು.

ಅಂಕಣಕಾರ, ಲೇಖಕ, ಸಹಾಯಕ ಪ್ರಾಧ್ಯಾಪಕ ಮತ್ತು ಅಂತರರಾಷ್ಟ್ರೀಯ ಭಾಷಣಕಾರರಾದ ಪ್ರಾಧ್ಯಾಪಕ ಅರುಣ್ ಕುಮಾರ್ ಅಲಗೊಂಡಾ, ಇವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಶ್ರೀಮತಿ ರೇಖಾ ಕೆ ಅವರು ಸಂಪನ್ಮೂಲ ವ್ಯಕ್ತಿ ಯನ್ನು ಪರಿಚಯಿಸಿದರು ಮತ್ತು ಭಾಗವಹಿಸಿದವರನ್ನು ಸ್ವಾಗತಿಸಿದರು.


ಪ್ರಾಧ್ಯಾಪಕ ಅರುಣ್ ಕುಮಾರ್ ಅಲಗೊಂಡಾ ಇವರು ಇಂಗ್ಲಿಷ್ ವರ್ಗೀಕರಣ, ಇಂಗ್ಲಿಷ್ ಭಾಷೆಯ ಅಂಗರಚನಾಶಾಸ್ತ್ರ, ಕೌಶಲ್ಯಗಳು, ಶಿಷ್ಟಾಚಾರಗಳ ಪ್ರಾಮುಖ್ಯತೆ, ಸಂದರ್ಶನ ಕೌಶಲ್ಯಗಳು, ಇಂಗ್ಲಿಷ್ ಭಾಷೆಯ ಅವಕಾಶಗಳು,ಅವಶ್ಯಕತೆಗಳು ಸಾಹಿತ್ಯದ ಪ್ರಕಾರಗಳು ಮತ್ತು ಸಾಧನಗಳು, ಸಾಹಿತ್ಯ ಸಿದ್ಧಾಂತ ಮತ್ತು ವಿಮರ್ಶೆಯನ್ನು ಹೇಗೆ ಅಧ್ಯಯನ ಮಾಡಬಹುದೆಂದು ತಿಳಿಸಿದರು ಮತ್ತು ಆಂತರಿಕ ಮೂಲಗಳನ್ನು ಹೇಗೆ ಬಳಸುವುದು ಮತ್ತು NET ಮತ್ತು SLET ಗೆ ಭವ್ಯವಾದ ರೀತಿಯಲ್ಲಿ ತಯಾರಿ ಮಾಡಬೇಕೆಂದು ಹೇಳಿದರು.

ಒಂದೂವರೆ ಗಂಟೆಗಳ ಕಾಲ ನಡೆದ ಈ ಆನ್ಲೈನ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು ಮತ್ತು 13 ವಿವಿಧ ದೇಶಗಳಿಂದ 800 ಕ್ಕೂ ಹೆಚ್ಚು ಭಾಗವಹಿಸುವವರು ನೋಂದಾಯಿಸಿಕೊಂಡಿದ್ದರು. ಮತ್ತು ಅವರಲ್ಲಿ 550 ಮಂದಿ ಭಾಗವಹಿಸಿದರು.ಹಾಗೂ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮವು ಪ್ರಶ್ನೋತ್ತರ ಅವಧಿಯನ್ನು ಸಹ ಒಳಗೊಂಡಿತ್ತು. ಅಧ್ಯಕ್ಷ ಭಾಷಣದಲ್ಲಿ, ಪ್ರಾಂಶುಪಾಲರಾದ ಡಾ.ಜೋಸೆಫ್ ಎನ್ ಎಂ ಅವರು ಸಂಪನ್ಮೂಲ ವ್ಯಕ್ತಿಯನ್ನು ಶ್ಲಾಘಿಸಿದರು ಮತ್ತು ಈ ಅಂತರಾಷ್ಟ್ರೀಯ ವೆಬ್‌ನಾರ್‌ನ ಯಶಸ್ಸಿಗೆ ಎಲ್ಲರನ್ನು ಅಭಿನಂದಿಸಿದರು.ಈ ಆನ್ಲೈನ್ ವೆಬಿನಾರನ್ನು ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಸ್ಪೂರ್ತಿ ಕೆ,ಯವರು ನಿರೂಪಿಸಿದರು ಮತ್ತು ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.  ತಾಂತ್ರಿಕ ನೆರವನ್ನು ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀ ರೋಬಿನ್ ಜೋಸೆಫ್ ಸೆರಾ ನೀಡಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.