HomePage_Banner_
HomePage_Banner_

ಹೊಸಂಗಡಿ ಕೋವಿಡ್ 19 ಕಂಡು ಬಂದ ಹಿನ್ನಲೆ ಪಂಚಾಯತ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ

ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರದಬೆಟ್ಟು ಪರಿಸರದಲ್ಲಿ ಸುಮಾರು 20 ಕುಟುಂಬಗಳ 30 ಸದಸ್ಯರಿಗೆ ಕೋವಿಡ್ 19 ಕಂಡು ಬಂದ ಹಿನ್ನಲೆಯಲ್ಲಿ ತುರ್ತಾಗಿ ಪಂಚಾಯತ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಜಿ ಪಂ ಸದಸ್ಯರಾದ ಧರಣೇಂದ್ರ ಕುಮಾರ್, ವೇಣೂರು ಪೋಲೀಸ್ ಸಬ್ ಇನ್ಪೆಕ್ಟರ್ ಲೋಹಿತಾಶ್ವ, ಆರೋಗ್ಯ ಇಲಾಖಾಧಿಕಾರಿಗಳು, ಆರೋಗ್ಯ ಸಹಾಯಕಿಯರು, ಪಂಚಾಯತ್ ಕಾರ್ಯದರ್ಶಿ ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಮುರದಬೆಟ್ಟು ಪ್ರದೇಶ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯ ಇನ್ನಿತರ ಪ್ರದೇಶಗಳಲ್ಲಿ ಕೊರೊನ ಹರಡುವುದನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಮುರದಬೆಟ್ಟು ರಸ್ತೆಗೆ ನಿರ್ಬಂಧಗಳನ್ನು ಅಳವಡಿಸಲು ನಿರ್ಣಯಿಸಲಾಯಿತು. ಆಯ್ದ ಸ್ಥಳಗಳಲ್ಲಿ ಜಾಗ್ರತಿ ಬ್ಯಾನರ್ ಅಳವಡಿಸಲು ನಿರ್ಣಯಿಸಲಾಯಿತು. ಕರಪತ್ರ ಮತ್ತು ಧ್ವನಿವರ್ಧಕ ಮೂಲಕ ಜಾಗ್ರತಿ ಮೂಡಿಸಲು ನಿರ್ಣಯಿಸಲಾಯಿತು. ಹಾಲಿನ ಸೊಸೈಟಿ ಮತ್ತು ಸೇವಾ ಬ್ಯಾಂಕ್ ನಲ್ಲಿಯೂ ಜಾಗ್ರತಿ ಮೂಡಿಸಲು ನಿರ್ಣಯಿಸಲಾಯಿತು. ತುರ್ತು ಸಂದರ್ಭಗಳಲ್ಲಿ ಸ್ಪಂದಿಸಲು ಸಮಿತಿಯನ್ನು ರಚಿಸಲಾಯಿತು. ಕೋವಿಡ್ 19 ಸಮುದಾಯಕ್ಕೆ ಹರಡದಂತೆ ಕ್ರಮ ವಹಿಸಲು ಆರೋಗ್ಯ ಇಲಾಖೆಯೊಂದಿಗೆ ಗ್ರಾಮ ಪಂಚಾಯತ್ ಮತ್ತು ಪೋಲೀಸ್ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲು ನಿರ್ಣಯಿಸಲಾಯಿತು. ಸೆ.17 ರಂದು ಆಡಳಿತಾಧಿಕಾರಿಗಳು, ಪಿಡಿಒ ಹಾಗೂ ಆರೋಗ್ಯ ಸಹಾಯಕಿಯರು ಮುರದಬೆಟ್ಟು ಪ್ರದೇಶಕ್ಕೆ ಭೇಟಿ ನೀಡಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.