ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಗಳ ಬಗ್ಗೆ ಗಮನ ಹರಿಸುವಂತೆ ಕಾಂಗ್ರೆಸ್ ನಿಯೋಗ ಆಗ್ರಹ: ಎ.ಸಿಗೆ ಮನವಿ

ಬೆಳ್ತಂಗಡಿ: ತಾಲೂಕು ಕಚೇರಿಯಲ್ಲಿ 94ಸಿ ಹಕ್ಕು ಪತ್ರ ನೀಡುವಲ್ಲಿ ವಿಳಂಬ, ತಾಲೂಕು ಕಚೇರಿಗೆ ಅರ್ಜಿ ನೀಡಲು ಬಂದ ಬಡವರನ್ನು ಹಿಂದಕ್ಕೆ ಕಳುಹಿಸುತ್ತಿರುವುದು, ಕಡತಗಳ ನಾಪತ್ತೆ ಸೇರಿದಂತೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಗಮನಹರಿಸುವಂತೆ ಒತ್ತಾಯಿಸಿ ಮಾಜಿ ಶಾಸಕ ಕೆ. ವಸಂತ ಬಂಗೇರ ಹಾಗೂ ಮಾಜಿ ಸಚಿವ ಗಂಗಾಧರ ಗೌಡ ಇವರ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ಸೆ.15ರಂದು ಮಧ್ಯಾಹ್ನ ತಾಲೂಕು ಕಚೇರಿಯಲ್ಲಿ ಪುತ್ತೂರು ಸಹಾಯಕ ಕಮೀಷನರ್ ಡಾ| ಯತೀಶ್ ಉಲ್ಲಾಳ್ ಅವರಿಗೆ ಮನವಿ ಸಲ್ಲಿಸಿದರು.

ಬೆಳಗ್ಗೆ ಬೆಳ್ತಂಗಡಿ ಗುರುನಾರಾಯನ ಸಭಾ ಭವನದಲ್ಲಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು. ಮಧ್ಯಾಹ್ನ 2 ಗಂಟೆಗೆ ತಾಲೂಕು ಕಚೇರಿಗೆ ತೆರಳಿ ಸಹಾಯಕ ಕಮೀಷನರ್ ಅವರನ್ನು ಭೇಟಿಯಾಗಿ ಅವರ ಜೊತೆ ಸಮಲೋಚನೆ ನಡೆಸಿ ಮನವಿಯನ್ನು ಸಲ್ಲಿಸಲಾಯಿತು.

ಮುಖ್ಯವಾಗಿ 94 ಸಿ ಯೋಜನೆಯಡಿ ತಯಾರಾದ ಸುಮಾರು 1,000/- ಹಕ್ಕುಪತ್ರ ತಕ್ಷಣ ಫಲಾನುಭವಿಗಳಿಗೆ ನೀಡಬೇಕು, ಎ.ಪಿ.ಎಲ್ ಪಡಿತರ ಚೀಟಿ ಸರಂಡರ್ ಮಾಡಿದ ಜನರಿಂದ ಪಡಕೊಂಡ ದಂಡದ ಹಣವನ್ನು ತಕ್ಷಣ ವಾಪಾಸು ನೀಡುವರೇ ಕ್ರಮ ಕೈಗೊಳ್ಳಬೇಕು, ವರ್ಷಾನುಗಟ್ಟಲೆ ವಿಲೇವಾರಿಗೆ ಬಾಕಿ ಇರಿಸಿಕೊಂಡಿರುವ ಸಾರ್ವಜನಿಕರ ಕಡತಗಳನ್ನು ತಕ್ಷಣ ವಿಲೇವಾರಿ ಮಾಡಬೇಕು, ದೃಡೀಕೃತ ನಕಲು ಕೋರಿ ನೀಡಿದ ಅರ್ಜಿಗಳನ್ನು ತಿಂಗಳುಗಟ್ಟಲೆ ಇರಿಸಿಕೊಮಡು ಸತಾಯಿಸುವ ವ್ಯವಸ್ಥೆಯನ್ನು ಸರಿಪಡಿಸಬೇಕು, ತಾಲೂಕು ಕಚೇರಿಗೆ ನೀಡಲು ತಂದಂತಹ ಅರ್ಜಿಗಳನ್ನು ಸ್ವೀಕರಿಸದೇ ಹಿಂದಕ್ಕೆ ಕಳುಹಿಸುವ ಕ್ರಮವನ್ನು ತಕ್ಷಣ ನಿಲ್ಲಿಸಬೇಕು, ಅಕ್ರಮ-ಸಕ್ರಮ ಯೋಜನೆಯಡಿ ಮಂಜೂರಾದ ಸ್ತಿರಾಸ್ತಿಗಳ ಬಗ್ಗೆ ಮರು ತನಿಖೆ ನಡೆಸುವುದಾಗಿ ತಹಶೀಲ್ದಾರರು ನೋಟಿಸು ಮಾಡಿದ್ದು, ಇದನ್ನು ಕೂಡಲೇ ನಿಲ್ಲಿಸಿ, ಅವರಿಗೆ ಹಕ್ಕುಪತ್ರ ನೀಡಬೇಕು ಎಂದು ವಸಂತ ಬಂಗೇರ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯೆ ನಮೀತಾ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ನ್ಯಾಯವಾದಿಗಳಾದ ಮನೋಹರ ಇಳಂತಿಲ, ಜಿ.ಪಂ ಸದಸ್ಯೆ ನಮಿತಾ, ಶೈಲೇಶ್ ಠೋಸರ್, ಆಶ್ರಫ್ ನೆರಿಯ, ಮೋಹನ್ ಕಲ್ಮಂಜ, ವಿವಿಧ ಘಟಕಗಳ ಮುಖ್ಯಸ್ಥರು, ಕಾಂಗ್ರೆಸ್ ಕಾರ್ಯಕರ್ತರು, ಫಲಾನುಭವಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.