HomePage_Banner_
HomePage_Banner_

ಏರಂಗಲ್ಲು ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಮಾಸಾಚರಣೆ

ಕುವೆಟ್ಟು : ಇಲ್ಲಿಯ ಏರಂಗಲ್ಲು ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಮಾಸಚರಣೆ ಕಾರ್ಯಕ್ರಮ ಸೆ.14 ರಂದು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಬಾಲವಿಕಾಸ ಸಮಿತಿ ಸದಸ್ಯೆ ಜಾನಕಿ ಅಧ್ಯಕ್ಷತೆ ವಹಿಸಿದ್ದರು. ಕಿರಿಯ ಆರೋಗ್ಯ ಸಹಾಯಕಿ ಪ್ರೀತಿ ಶೆಟ್ಟಿ ಮಾತನಾಡುತ್ತಾ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದ ಉದ್ದೇಶ ಹಾಗೂ ಗರ್ಭ ವಸ್ಥೆಯಲ್ಲಿ ಗಭಿರ್ಣಿಯರು ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ,ಕೊರೊನಾ ಕೊವಿಡ್ 19 ವೈರಸ್‌ ತಡೆಗಟ್ಟಲು ಮಕ್ಕಳ ತಾಯಿ‌‍ಯಂದಿರಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡಿದರು.

ತಾಲೂಕು ಪಂಚಾಯತು ಸದಸ್ಯ ಗೋಪಿನಾಥ್ ನಾಯಕ್, ಆಶಾ ಕಾರ್ಯಕರ್ತೆ ಜಯಂತಿ,ಮುಮ್ತಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಅಂಗನವಾಡಿ ಸಹಾಯಕಿ ಶೀಲಾವತಿ, ಮಕ್ಕಳ ಪೋಷಕರು ಸಹಕರಿಸಿದರು. ಪುಷ್ಪಾವತಿ ಪ್ರಾರ್ಥನೆ ಮಾಡಿದರು.ಅಂಗನವಾಡಿ ಕಾರ್ಯಕರ್ತೆ ಆಶಾಲತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಜಯಂತಿ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.