ಕುವೆಟ್ಟಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ; ರಾಷ್ಟ್ರ ಮಟ್ಟದ ಸಾಧಕ‌ ಶಿಕ್ಷಕ ಯಾಕೂಬ್ ಸನ್ಮಾನ

ಕುವೆಟ್ಟು: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ) ಸುನ್ನತ್‌ಕೆರೆ ಬ್ರಾಂಚ್ ಸಮಿತಿ ವತಿಯಿಂದ ಬೃಹತ್ ರಕ್ತದಾನ ಶಿಬಿರ, ಆಯುಷ್ಮಾನ್ ಕಾರ್ಡ್ ನೋಂದಾವಣೆ, ಪಿ.ಎಮ್ ಕಿಸಾನ್ ಸಮ್ಮಾನ್ ನಿಧಿ, ಕಾರ್ಯಕ್ರಮ ಹಾಗೂ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಯಾಕೂಬ್ ಮಾಸ್ಟರ್‌ ಕೊಯ್ಯೂರು ಅವರಿಗೆ ಸನ್ಮಾನ ಸಮಾರಂಭ ಸೆ.13 ರಂದು ಇಲ್ಲಿನ‌ ಖಾಸಗಿ ವಾಣಿಜ್ಯ ಮಳಿಗೆ ಬಳಿ‌ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹೈದರ್ ನೀರ್‌ಸಾಲ್ ವಹಿಸಿದ್ದರು.

ಮುಖ್ಯ ಅತಿಥಿಯಾಗಿದ್ದ ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ,‌ ತಾಲೂಕು ಪತ್ರಕರ್ತರ ಸಂಘದ ಅಶ್ರಫ್ ಆಲಿಕುಂಞಿ ಮುಂಡಾಜೆ, ಕೆ.ಎಂ.ಸಿ ಅತ್ತಾವರ ಆಸ್ಪತ್ರೆಯ ಡಾ. ರಾಯಚಂದ್ ಶುಭ ಕೋರಿದರು. ಸಮಾರಂಭದಲ್ಲಿ ಕುವೆಟ್ಟು ಗ್ರಾಮ‌ಕರಣಿಕ ನಾರಾಯಣ ಕುಲಾಲ್, ಕೆ.ಎಸ್.ಆರ್.ಟಿ.ಸಿ ನಿವೃತ ತಾಂತ್ರಿಕ ಅಧಿಕಾರಿ ಎಂ.ಡಿ‌ ಸಾದಿಕ್ ಸಾಹೇಬ್, ಎಸ್.ಡಿ.ಪಿ.ಐ ತಾಲೂಕು ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಕುವೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ದಾವೂದ್ ಗುರುವಾಯನಕೆರೆ, ಗುತ್ತಿಗೆದಾರ ಅಬ್ದುಲ್ ರಹಮಾನ್, ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಪ್ರಸ್ತುತ ಸಾಲಿನ ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನಡ ಸರಕಾರಿ ಪ್ರೌಢ ಶಾಲೆ ಶಿಕ್ಷಕ, ಗಣಿತ ಪ್ರಯೋಗಾಲಯದ ಸ್ಥಾಪಕ ಯಾಕೂಬ್ ಮಾಸ್ಟರ್ ಕೊಯ್ಯೂರು ಅವರನ್ನು ಸನ್ಮಾನಿಸಲಾಯಿತು. ಖಲಂದರ್ ಸ್ವಾಗತಿಸಿದರು.‌ಪಿ.ಎಫ್.ಐ ತಾಲೂಕು ಅಧ್ಯಕ್ಷ ಮುಸ್ತಫಾ ಗುರುವಾಯನಕೆರೆ ಪ್ರಸ್ತಾವನೆಗೈದರು. ನಿಸಾರ್ ಗುರುವಾಯನಕೆರೆ ಕಾರ್ಯಕ್ರಮ ನಿರೂಪಿಸಿ, ಸನ್ಮಾನಿತರ ಮರಿಚಯ ಮಂಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.