HomePage_Banner_
HomePage_Banner_

ರೂ.28.96 ಕೋಟಿ ವೆಚ್ಚದ ಉಜಿರೆ-ಬೆಳಾಲು ಕುಪ್ಪೆಟ್ಟಿ ರಸ್ತೆಗೆ ಸಂಸದ ನಳಿನ್‍ಕುಮಾರ್ ಶಿಲಾನ್ಯಾಸ

ಬೆಳ್ತಂಗಡಿ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ರಸ್ತೆ ಕಾಮಗಾರಿಗಳಿಗೆ ಮಂಜೂರಾದ ರೂ. 53.12 ಕೋಟಿ ವೆಚ್ಚದ ಕಾಮಗಾರಿಗಳಿಗೆ  ಗ್ರಾಮ ಸಡಕ್ ಯೋಜನೆ: ರೂ.28.96 ಕೋಟಿ ವೆಚ್ಚದ ಉಜಿರೆ-ಬೆಳಾಲು ಕುಪ್ಪೆಟ್ಟಿ ರಸ್ತೆಗೆ ಸೆ.14ರಂದು ಮಂಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಶಿಲಾನ್ಯಾಸ ನೆರವೇರಿಸಿದರು.


ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಮಂಜೂರುಗೊಂಡ ಪರಪ್ಪು- ಆದೂರುಪೆರಾಲ್ ರಸ್ತೆ-ರೂ.5.31 ಕೋಟಿ, ಲಾೈಲ-ಮೇಲಂತಬೆಟ್ಟು- ಕೋಟಿಕಟ್ಟೆ ರಸ್ತೆ ರೂ.8.09 ಕೋಟಿ, ಬೀಜದಡಿ-ಪಾರ್ಪಿಕಲ್ಲು ರಸ್ತೆ ರೂ.10.76 ಕೋಟಿ, ಉಜಿರೆ-ಬೆಳಾಲು ಕುಪ್ಪೆಟ್ಟಿ ರಸ್ತೆ ರೂ.28.96 ಕೋಟಿ ಸೇರಿದಂತೆ ಒಟ್ಟು ರೂ. 53.12 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ  ಜಯಂತ್ ಕೋಟ್ಯಾನ್,ತಾಲೂಕು ಬಿಜೆಪಿ ಮಂಡಲ ಉಪಾಧ್ಯಕ್ಷ ಸೀತಾರಾಮ್ ಬೆಳಾಲು, ಧರ್ಮಸ್ಥಳ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ,  ಕುವೆಟ್ಟು ಜಿ.ಪಂ ಸದಸ್ಯೆ ಮಮತಾ ಎಂ ಶೆಟ್ಟಿ, ಜಿ.ಪಂ ಸದಸ್ಯೆ ಸೌಮ್ಯಲತಾ, ತಾ.ಪಂ ಸದಸ್ಯ

 ರಾದ  ಕೊರಗಪ್ಪ ಗೌಡ, ಜೋಯೇಲ್ ಮೆಂಡೊನ್ಸಾ, ಸುದೀರ್ ಸುವಣ೯, ಕೃಷ್ಣಯ್ಯ ಆಚಾರ್ , ಅಮಿತಾ, ಸುಶೀಲ,ಬಿಜೆಪಿ ಮಂಡಲ ಅಧ್ಯಕ್ಷರ ಜಯಂತ ಕೋಟ್ಯಾನ್ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.