ಗ್ರಾಮ ಸಡಕ್ ಯೋಜನೆ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ

ಬೆಳ್ತಂಗಡಿ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ರಸ್ತೆ ಕಾಮಗಾರಿಗಳಿಗೆ ಮಂಜೂರಾದ ಕಾಮಗಾರಿಗಳಿಗೆ ಸೆ.14ರಂದು ಶಾಸಕ ಹರೀಶ್ ಪೂಂಜಾ ಶಿಲಾನ್ಯಾಸ ನೆರವೇರಿಸಿದರು. ಲಾೈಲ-ಮೇಲಂತಬೆಟ್ಟು- ಕೋಟಿಕಟ್ಟೆ ರಸ್ತೆ ರೂ.8.09 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು.


ಈ ಸಂದರ್ಭದಲ್ಲಿ  ಶಕ್ತಿ ಕೇಂದ್ರ ಮೇಲಂತಬೆಟ್ಟು ಚಂದ್ರರಾಜ್, ಲಾಯಿಲ ಗ್ರಾಪಂ ಮಾಜಿ ಉಪಾಧ್ಯಕ್ಷ ಗಿರೀಶ್ ಡೊಂಗ್ರೆ, ಲಾಯಿಲ ತಾಲೂಕು ಪಂಚಾಯತ್ ಸುಧಾಕರ್, ಮಡಂತ್ಯಾರು ಪಂಚಾಯತ್ ಸದಸ್ಯರಾದ ಜೋಯೆಲ್ ಮೆಂಡೋನ್ಸಾ, ಲಾಯಿಲ ಶಕ್ತಿಕೇಂದ್ರದ ಗಣೇಶ್ ಕನ್ನಾಜೆ, ಮಹಾಶಕ್ತಿ ಕೇಂದ್ರದ ಸದಾನಂದ ಉಂಗಿನಬೈಲು, ಗ್ರಾಮ.ಪ.ಮಾಜಿ ಅಧ್ಯಕ್ಷ ರುಕ್ಮಯ್ಯ ಕನ್ನಾಜೆ, ಲಾಯಿಲ.ಜಿ.ಪಂ.ಸದಸ್ಯರಾದ ಸೌಮ್ಯಲತಾ, ಜಿಪಂ ಸದಸ್ಯರಾದ ಮಮತಾ ಶೆಟ್ಟಿ, ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಗೌಡ, ಮೇಲಂತಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷರಾದ ಪ್ರಭಾಕರ, ಬೆಳ್ತಂಗಡಿ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಸುಧೀರ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.