HomePage_Banner_
HomePage_Banner_

ಪ್ರಾಥಮಿಕ ಶಾಲಾ‌ ಸಹಶಿಕ್ಷಕಿ ಶಶಿಕಲಾ ಬಿ ಪದೋನ್ನತಿಗೊಂಡು ವರ್ಗಾವಣೆ

ಬೆಳ್ತಂಗಡಿ; ಲಾಯಿಲ ಗ್ರಾಮದ ಕೈಪ್ಲೋಡಿ ನಿವಾಸಿ,‌ ಪ್ರಾಥಮಿಕ ಶಾಲಾ‌ ಸಹಶಿಕ್ಷಕಿಯಾಗಿದ್ದ ಶಶಿಕಲಾ ಬಿ ಅವರಿಗೆ ಇದೀಗ ಪದೋನ್ನತಿಯಾಗಿದ್ದು ಪ್ರೌಢ ಶಾಲಾ ಶಿಕ್ಷಕಿಯಾಗಿ ವರ್ಗಾವಣೆ ಯಾಗಿದೆ.

2004 ನೇ ಇಸವಿಯಲ್ಲಿ ಶಿಕ್ಷಣ ಇಲಾಖೆಗೆ ಸಹಶಿಕ್ಷಕಿ ಆಗಿ ನಿಯೋಜನೆಗೊಂಡು ಬೆಳ್ತಂಗಡಿ ತಾಲೂಕಿನ ಹುಣ್ಸೆಕಟ್ಟೆ ಪ್ರಾಥಮಿಕ ಶಾಲೆ ಮತ್ತು ಕೊಯ್ಯೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರಿಗೆ ಇದೀಗ ಪ್ರೌಢಶಾಲೆಗೆ ಪದೋನ್ನತಿಗೊಂಡು ಬೆಳ್ತಂಗಡಿ ತಾಲೂಕಿನ ಪಡಂಗಡಿ ಸರಕಾರಿ ಪ್ರೌಢಶಾಲೆಗೆ ವರ್ಗಾವಣೆ ಆಗಿದೆ.

ಇವರು 2002ನೇ ಇಸವಿಯಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂದು ಮೂಲ ತರಬೇತಿಯನ್ನು ಮುಗಿಸಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ 2 ವರ್ಷ ಕರ್ತವ್ಯ ನಿರ್ವಹಿಸಿದ ಅನುಭವವನ್ನೂ ಹೊಂದಿದ್ದಾರೆ. ಇವರ ಪತಿ ವಿಶ್ವನಾಥ ಅವರು ಧರ್ಮಸ್ಥಳ ಠಾಣೆಯಲ್ಲಿ ಪೊಲೀಸ್ ಹೆಡ್‌ಕಾನ್ಸ್‌ಟೇಬಲ್ ಆಗಿದ್ದು, ಪ್ರಸ್ತುತ ಠಾಣಾ ಬರಹಗಾರರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.