ಹಣ ದರೋಡೆ ಪ್ರಕರಣ ಆರೋಪ: ಯೋಗೀಶ್ ಕುಮಾರ್ ಅಮಾನತು

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಂಗಳೂರಿನಲ್ಲಿ ಎಸ್. ಜೆ. ಪಾಕ್೯ ಪೊಲೀಸ್ ಠಾಣೆ ಯಲ್ಲಿ ವೃತ್ತ ನಿರೀಕ್ಷಕರಾಗಿರುವ

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಸ್. ಐ ಆಗಿ ಸೇವೆ ಸಲ್ಲಿಸಿದ್ದ, ಯೋಗೀಶ್ ಕುಮಾರ್ ಅವರನ್ನು ಅಮಾನತುಗೊಳಿಸಿ ಪೊಲೀಸ್ ಕಮೀಷನರ್ ಕಮಲ್ ಪಂತ್ ಆದೇಶಿಸಿದ್ದಾರೆ.


ತುಮಕೂರಿನ ಅಡಿಕೆ ವ್ಯಾಪಾರಿ ಯೋವ೯ರ ಹಣ ದರೋಡೆ ಪ್ರಕರಣದಲ್ಲಿ ಶಾಮೀಲು ಆಗಿದ್ದಾರೆಂಬ ಆರೋಪದಲ್ಲಿ ಈ ಅಮನಾತು ಆದೇಶ   ಮಾಡಲಾಗಿದೆ.
ತುಮಕೂರು ತೆಂಗು ಅಡಿಕೆ ವ್ಯಾಪಾರಿ ಮೋಹನ್ ಎಂಬವರು ಚಿಕ್ಕಪೇಟೆ ಬಳಿ ಇರುವ ಅಂಗಡಿಗೆ ಅಡಿಕೆ ಮಾರಾಟ ಮಾಡಿದ್ದರು, ಬಾಕಿ ಹಣವನ್ನು ತರಲು ತನ್ನ ಕೆಲಸ ಗಾರನ್ನು ಕಳುಹಿಸಿದ್ದರು, ಅವರು ಹಣ ಪಡೆದು ಕಾರಿನಲ್ಲಿ ಬರುತ್ತಿರುವಾಗ ಎಸ್. ಜೆ.ಪಾಕ್೯ ಎಸ್. ಐ ಜೀವನ್ ಕುಮಾರ್ ಮತ್ತು ಪೊಲೀಸ್ ರು ಕಾರನ್ನು ಅಡ್ಡ ಗಟ್ಟಿ ರೂ.26 ಲಕ್ಷ ದೋಚಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಸಿ.ಟಿ ಮಾಕೆ೯ಟ್ ಠಾಣೆ ಯಲ್ಲಿ ಕೇಸ್ ಮಾಡಲಾಗಿತ್ತು. ಹಣ ದರೋಡೆ ನಡೆ ಸಿದವರ ಜೊತೆ ಶಾಮೀಲಾದ ಎಸ್. ಐ ಮೇಲೆ   ಯೋಗೀಶ್ ಕುಮಾರ್ ಯಾವುದೇ  ಕ್ರಮವನ್ನು ಕೈಗೊಂಡಿಲ್ಲ ಎನ್ನುವ ಆರೋಪದಲ್ಲಿ  ಆವರನ್ನು   ಅಮಾನತು ಮಾಡಲಾಗಿದೆ ಎನ್ನಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.