ಇಳಂತಿಲ ಕನ್ಯಾರಕೋಡಿ ನೀರಿನ ಟ್ಯಾಂಕ್ ರಚನೆಗೆ ಶಂಕುಸ್ಥಾಪನೆ

Advt_NewsUnder_1
Advt_NewsUnder_1
Advt_NewsUnder_1

ಇಳಂತಿಲ: ಇಳಂತಿಲ ಗ್ರಾಪಂ ವ್ಯಾಪ್ತಿಯ ಕನ್ಯಾರಕೋಡಿ ಎಂಬಲ್ಲಿ ಜಿಲ್ಲಾ ಪಂಚಾಯಿತ್‍ನ ಅನುದಾನದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಮಂಜೂರಾದ ಹನ್ನೆರಡು ಲಕ್ಷ ವೆಚ್ಚದ ಕುಡಿಯುವ ನೀರಿನ ಟ್ಯಾಂಕ್ ರಚನೆಗೆ ಸೆ 11 ರಂದು ಕಣಿಯೂರು ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ. ಕೆ ಶಾಹುಲ್ ಹಮೀದ್ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಆದಷ್ಟು ಶೀಘ್ರ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು ಪಂಪು ಅಳವಡಿಕೆಗಾಗಿ ಟಿ.ಸಿ ಅಳವಡಿಸಲು ಮುಂದಿನ ಬಜೆಟ್ ನಲ್ಲಿ ಅನುದಾನ ಮೀಸಲಿರಿಸುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಗ್ರಾ. ಪಂ ಅಧ್ಯಕ್ಷ ಮನೋಹರ್ ಕುಮಾರ್ ರವರು ಗುತ್ತಿಗೆದಾರರ ನಿರ್ಲಕ್ಷದಿಂದಾಗಿ ಈ ಕಾಮಗಾರಿ ಇನ್ನೂ ಪ್ರಾರಂಭಗೊಂಡಿಲ್ಲ ಎಂದರು ಕಾರ್ಯಕ್ರಮದಲ್ಲಿ ತಾ. ಪಂ ಮಾಜಿ ಸದಸ್ಯರಾದ ಮಾಯಿಳಾತ್ತೋಡಿ ಈಶ್ವರ ಭಟ್, ಗ್ರಾಪಂ ಮಾಜಿ ಅಧ್ಯಕ್ಷರಾದ ಯುಕೆ ಇಸುಬು, ಗ್ರಾಪಂ ಮಾಜಿ ಸದಸ್ಯರಾದ ಈಶ್ವರ ಗೌಡ, ಬಾರಿಕೆ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೀತಾ ಆರ್ ಸಾಲಿಯಾನ್, ಸ್ಥಳೀಯ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಅಬ್ದುಲ್ ಲತೀಫ್, ಜಾರಪ್ಪ ಗೌಡ, ಆದಂ ತಿಮರಡ್ಡ, ರಫೀಕ್ ಎನ್ ಎಂ, ನಜೀರ್, ಈಶ್ವರ ಪೂಜಾರಿ, ಅನ್ಸಾರ್ ಜಿನ್ನಪ್ಪ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.