ಭಂಡಿಹೊಳೆ: ಮೊಬೈಲ್ ಟವರ್ ಗೆ ಶಿಲಾನ್ಯಾಸ

ಶಿಬಾಜೆ: ಭಂಡಿಹೊಳೆ , ಬೂಡುದಮಕ್ಕಿ, ಪೆರ್ಲ, ಪರಿಸರದ ಜನರ ಬಹುವರ್ಷಗಳ ಬೇಡಿಕೆಯಾದ ಮೊಬೈಲ್ ಟವರ್ ಇದರ ಶಿಲಾನ್ಯಾಸವನ್ನು ಭಂಡಿಹೊಳೆಯಲ್ಲಿ ಶಾಸಕ ಹರೀಶ್ ಪೂಂಜಾ ಸೆ.11 ರಂದು ನೆರವೇರಿಸಿದರು.

ಈ ಭಾಗದ ಜನರಿಗೆ, ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್, ಮೊಬೈಲ್ ಸಂಪರ್ಕವಿಲ್ಲದೆ ಬಹಳಷ್ಟು ತೊಂದರೆಯಾಗುತ್ತಿದ್ದು ಇಲ್ಲಿ ಮೊಬೈಲ್ ಟವರ್ ನಿರ್ಮಾಣಗೊಂಡರೆ ಆಸುಪಾಸಿನ ಹಲವಾರು ಜನರಿಗೆ ಪ್ರಯೋಜನವಾಗುತ್ತದೆ.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂಧ್ರ ನಾಯಕ್,  ಕೊಕ್ಕಡ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯೋಗೀಶ್ ಆಲಂಬಿಲ, ಕಾರ್ಯದರ್ಶಿ ಕರುಣಾಕರ ಶಿಶಿಲ, ಏರ್ ಟೆಲ್ ಏರಿಯಾ ಮ್ಯಾನೇಜರ್  ಕಿರಣ್ ಕುಮಾರ್ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.