ಉಜಿರೆ ಜೇಸಿ ಸಪ್ತಾಹ ಸಪ್ತ ಸಂಭ್ರಮ 2020

Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಜ್ಯೂನಿಯರ್ ಛೆoಬರ್ ಇಂಟರ್ ನ್ಯಾಶನಲ್ ಉಜಿರೆ ಇದರ ವತಿ ಯಿಂದ ಪ್ರತಿವರ್ಷ ನಡೆಯುವಂತೆ ಇಂದು ಸೆ. 9ರಿಂದ 15 ರ ವರೆಗೆ ನಡೆಯುವ ಜೇಸಿ ಸಪ್ತಾಹ ದ ಉದ್ಘಾಟನೆ ಸೆ. 9ರಂದು ಉಜಿರೆ ಎಸ್ ಡಿ ಎಂ ಪದವಿ ಪೂರ್ವಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಜೇಸಿ ಸಪ್ತಾಹದ ಉದ್ಘಾಟನೆಯನ್ನು ಜೇಸಿ ರಾಷ್ಟ್ರೀಯ ತರಬೇತು ದಾರರು ಜೇಸಿಐ ಸೆನೆಟರ್ ಕೃಷ್ಣಮೋಹನ್ ನೆರವೇರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಉಜಿರೆ ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದಿನೇಶ್ ಚೌಟ ಉಪಸ್ಥಿತರಿದ್ದು ಶುಭ ಹಾರೈಸಿದರು. ಜೇಸಿ ವಲಯ ಉಪಾಧ್ಯಕ್ಷ ಜೇಸಿ ಮೇಧಾವಿ ಎಂ, ನಿಕಟ ಪೂರ್ವ ಅಧ್ಯಕ್ಷ ಜೇಸಿ ಸಂಪತ್ ಕುಮಾರ್, ಜೇಸಿರೆಟ್ ಅಧ್ಯಕ್ಷೆ ಸೌಮ್ಯ ನವೀನ್, ಜೆಜೆಸಿ ಅಧ್ಯಕ್ಷ ಪ್ರಜ್ವಲ್, ಸಪ್ತಾಹ ನಿರ್ದೇಶಕ ಜೇಸಿ ಡಾ. ಚಿದಾನಂದ ಮತ್ತು ಜೇಸಿ ನಿಖಿತ್ ಜೈನ್,ಜೇಸಿ ಖಜಾಂಚಿ ವಿಕಾಸ್ ರಾವ್ ಉಪಸ್ಥಿತರಿದ್ದರು. ಜೇಸಿ ಅಧ್ಯಕ್ಷ ಜೇಸಿ ಡಾ. ನವೀನ್ ಅಧ್ಯಕ್ಷೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಜೇಸಿ ದೀಕ್ಷಿತ್ ರೈ ವಂದಿಸಿದರು. ಜೇಸಿ ಹೆಚ್ ಜೆಎಫ್ ಡಾ. ಬಿ. ಎ. ಕುಮಾರ್ ಹೆಗ್ಡೆ ವೇದಿಕೆಗೆ ಬರ ಮಾಡಿ ಕೊಂಡರು. ಜೇಸಿ ಮಹೇಶ್ ಕುಮಾರ್ ಶೆಟ್ಟಿ ಉದ್ಘಾಟಕರ ಪರಿಚಯ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.