ನಾಲ್ಕೂರು: ಸಂಚಾರಿ ಪಡಿತರ ವಿತರಣೆ ವಿಸ್ತರಿಸಲು ಶಾಸಕ ಹರೀಶ್ ಪೂಂಜರಿಗೆ ಮನವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಾಲ್ಕೂರು: ಬಳಂಜ, ನಾಲ್ಕೂರು, ತೆಂಕಕಾರಂದೂರು ಗ್ರಾಮಸ್ಥರಿಗೆ ನ್ಯಾಯಬೆಲೆ ಅಂಗಡಿಯು ಬಳಂಜದಲ್ಲಿ ಒಂದೆ ಕಡೆಯಾಗಿದ್ದು, ನಾಲ್ಕೂರಿನ ಗ್ರಾಮದ ಗ್ರಾಮಸ್ಥರು ಪಡಿತರ ಪಡೆಯಲು ಸರಿಸುಮಾರು ಕೆಲವು ಕಿ.ಮೀ ದೂರದಿಂದ ಬಂದು ಕೊಂಡೊಗುವ ಪರಿಸ್ಥಿತಿ ಎದುರಾಗಿದ್ದು ನಾಲ್ಕೂರಿನಲ್ಲಿ ಸಂಚಾರಿ ಪಡಿತರ ವಿತರಣೆ ವಿಸ್ತರಿಸುವ ಬಗ್ಗೆ ಬಳಂಜ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಯೈಕುರಿಯವರ ನೇತೃತ್ವದಲ್ಲಿ ಶಾಸಕ ಹರೀಶ್ ಪೂಂಜರಿಗೆ ಶ್ರಮಿಕ ಕಚೇರಿಯಲ್ಲಿ ಮನವಿ ನೀಡಲಾಯಿತು.
ಕೆಲವು ಮನೆಗಳಲ್ಲಿ ವೃದ್ಧರು ಮತ್ತು ಅಶಕ್ತರು ಮಾತ್ರವಿದ್ದು ಹಾಗೂ ಸರಿಯಾದ ವಾಹನ ವ್ಯವಸ್ಥೆ ಇಲ್ಲದಿದ್ದುದರಿಂದ ಪ್ರತೀ ತಿಂಗಳು 5ಕಿ.ಮೀ ನಡೆದುಕೊಂಡು ಬಂದು ಪಡಿತರ ಪಡೆದುಕೊಂಡು ಹೋಗುವುದು ಕಷ್ಟಕರವಾಗಿದೆ. ಪರ್ಯಾಯ ವ್ಯವಸ್ಥೆಯಾಗಿ ಸಂಚಾರಿ ಪಡಿತರ ಮಾಡಬೇಕಾಗಿ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭ ಅಳದಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಶಿವಭಟ್ ಕಟ್ಟೂರು, ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು, ಗುತ್ತಿಗೆದಾರ ಸುರೇಶ್ ಪೂಜಾರಿ ಜೈಮಾತಾ ನಾಲ್ಕೂರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.