ಧರ್ಮಸ್ಥಳ: ಟಾಟಾ ಸಂಸ್ಥೆಯಿಂದ ನೆಕ್ಸಾನ್ ಇವಿ ಇಲೆಕ್ಟ್ರಿಕಲ್ ಕಾರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸೆ.9 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಂಗಳೂರಿನ ಆಟೋ ಮ್ಯಾಟ್ರಿಕ್ಸ್ನ ಎಮ್.ಡಿ ಡಿ. ರಾಜೇಂದ್ರ ಕುಮಾರ್, ಸಿ.ಇ.ಒ ಪ್ರದೀಪ್ ಮಯ್ಯ ಉಪಸ್ಥಿತರಿದ್ದರು. ಟಾಟಾ ನೆಕ್ಸಾನ್ ಎಲೆಕ್ಟ್ರಾನಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 313 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ.