HomePage_Banner_
HomePage_Banner_

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಹ್ಯೂಮಾನಿಟಿ ಟ್ರಸ್ಟ್ ವತಿಯಿಂದ ಮೊಂತಿ ಹಬ್ಬ

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಹ್ಯೂಮಾನಿಟಿ ಟ್ರಸ್ಟ್ ವತಿಯಿಂದ ಮೊಂತಿ ಹಬ್ಬ ಸೆ.8 ರಂದು ಮಾತೆ ಮರಿಯಮ್ಮನವರ ಹುಟ್ಟುಹಬ್ಬವನ್ನು ಸಿಯೋನ್ ಆಶ್ರಮದ ನಿವಾಸಿಗಳೊಂದಿಗೆ ಆಚರಿಸಲಾಯಿತು. ಹ್ಯೂಮಾನಿಟಿ ಟ್ರಸ್ಟ್‌ನ ವತಿಯಿಂದ ಮಧ್ಯಾಹ್ನದ ಭೋಜನ ವ್ಯವಸ್ಥೆ ಮತ್ತು ಸೈಂಟ್ ಅಂತೋನಿ ಚರ್ಚ್, ಫೆರ್ಮಾಯಿ, ಮಂಗಳೂರು ಇಲ್ಲಿಯ ಧರ್ಮಗುರುಗಳಾದ ರೆ.ಫಾ.ಲೂಯಿಸ್ ಕುಟಿನ್ಹಾರವರು ಎಲ್ಲಾ ನಿವಾಸಿಗಳಿಗಾಗಿ ಹ್ಯೂಮಾನಿಟಿ ಟ್ರಸ್ಟ್ ಮುಖೇನ ಕಬ್ಬು ನೀಡಿದ್ದು ಎಲ್ಲರಿಗೂ ವಿತರಿಸಲಾಯಿತು. ಹ್ಯೂಮಾನಿಟಿ ಟ್ರಸ್ಟ್‌ನ ಪ್ರಶಾಂತ್ ಫ್ರಾಂಕ್, ಮೆರ್‌ವಿನ್ ಡಿ’ಸಿಲ್ವ ಮತ್ತು ರೋಶನ್ ಡಿ’ಸಿಲ್ವರವರು, ಆಗಮಿಸಿದ್ದರು. ಸಿಯೋನ್ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟೀಯವರಾದ ಯು.ಸಿ.ಪೌಲೋಸ್‌ರವರು, ಟ್ರಸ್ಟೀ ಸದಸ್ಯರುಗಳು, ಕುಟುಂಬಸ್ಥರು, ಸಿಬ್ಬಂದಿವರ್ಗದವರು, ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.