ಅನಾರೋಗ್ಯ ಪೀಡಿತ ಆಂಬುಲೆನ್ಸ್ ಚಾಲಕ ರಿಗೆ ಆಸರೆಯಾದ ಅಂಬುಲೆನ್ಸ್ ಚಾಲಕರ ಸಂಘ ಚಾರ್ಮಾಡಿಯ ಭರತ್ ಅವರಿಗೆ 50 ಸಾವಿರ ನಗದು; ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ: ದೀರ್ಘ 40 ವರ್ಷಗಳಲ್ಲಿ ಆಂಬುಲೆನ್ಸ್ ಚಾಲಕರಾಗಿದ್ದು ಪ್ರಸ್ತುತ ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿ ಆರೈಕೆಯಲ್ಲಿರುವ ಚಾರ್ಮಾಡಿ ಗ್ರಾಮದ ಗೇಟ್ ಬಳಿ ನಿವಾಸಿ ಭರತ್ ಅವರಿಗೆ ಅಖಿಲ‌ ಕರ್ನಾಟಕ ಆಂಬುಲೆನ್ಸ್ ಚಾಲಕ ಮಾಲಕರ ಸಂಘ (ಎ.ಕೆ.ಎ.ಇ.ಎಸ್.ಟಿ) ಅವರ ವತಿಯಿಂದ 50 ಸಾವಿರ ರೂ. ಗಳ ಆರ್ಥಿಕ ನೆರವು ಮತ್ತು ಆಹಾರ ಸಾಮಾಗ್ರಿಗಳ ಕಿಟ್ ಅನ್ನು ಸೆ. 6 ರಂದು ವಿತರಿಸಲಾಯಿತು.

ಭರತ್ ಅವರು ಮಂಗಳೂರು ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ಬಳಿ‌ ಕಳೆದ 40 ವರ್ಷಗಳಿಂದ ಖಾಸಗಿ ಆಂಬುಲೆನ್ಸ್‌ನಲ್ಲಿ ಚಾಲಕರಾಗಿ ದುಡಿಯುತ್ತಾ ಹಿರಿಯ ಚಾಲಕರಾಗಿ ಗುರುತಿಸಿಕೊಂಡಿದ್ದರು. ತನ್ನ ಕರ್ತವ್ಯದ ವೇಳೆಯಲ್ಲಿ ಅವರು ತುರ್ತು ಸಂದರ್ಭದಲ್ಲಿ ಅನೇಕ ಮಂದಿಯ ಪ್ರಾಣರಕ್ಷಣೆಯ ಜೊತೆಗೆ ಅನೇಕ ಮಂದಿಯ ಮೃತದೇಹ ಸಾಗಾಟ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದರು.

ಮಾರ್ಚ್ ತಿಂಗಳ ಲಾಕ್‌ಡೌನ್ ದಿನಗಳ ಬಳಿಕ ಅನಾರೋಗ್ಯಕ್ಕೆ ತುತ್ತಾಗಿ ಕೆಲಸ ಮಾಡಲು ಅಶಕ್ತರಾಗಿರುವ ಅವರು ಇದೀಗ ಮನೆಯಲ್ಲೇ ನೆಲೆಸಿದ್ದು ಆರ್ಥಿಕ ತೊಂದರೆಯಿಂದ ಇದ್ದರು. ಇದನ್ನು ಮನಗಂಡ ಆಂಬುಲೆನ್ಸ್ ಚಾಲಕ ಮಾಲಕರ ಸಂಘದ ಸದಸ್ಯರು ಚಾರ್ಮಾಡಿಯ ಭರತ್ ಅವರ ಮನೆಗೇ ತೆರಳಿ ನೆರವು ನೀಡುವ ಮೂಲಕ ಸಹೋದ್ಯೋಗಿಗೆ ಸ್ಪಂದನೆ ನೀಡಿತು.

ಭರತ್ ಅವರ ಮನೆ ಭೇಟಿಯ ನಿಯೋಗದಲ್ಲಿ ಶ್ರೀ ಗಣೇಶ್ ಆಂಬುಲೆನ್ಸ್ ಮಾಲಕ ಪ್ರಸಾದ್, ಸಾಮಾಜಿಕ ಕಾರ್ಯಕರ್ತ ಆರೀಫ್ ಬಣಕಲ್, ಸುಳ್ಯದ ಪ್ರಗತಿ ಆಂಬುಲೆನ್ಸ್ ಚಾಲಕ ಅಭಿಲಾಷ್, ಜೈ ಭಾರತ್ ಆಂಬುಲೆನ್ಸ್ ಚಾಲಕ ಸಿರಾಜ್, ಗಣೇಶ್ ಆಂಬುಲೆನ್ಸ್ ಚಾಲಕರಾದ ಪ್ರವೀಣ್ ಮತ್ತು ಆಸಿಫ್, ಹೈಲ್ಯಾಂಡ್ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಅಯೂಬ್ ಆಲಿಕುಂಞಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.