ಮೃತ ಚಾಲಕನ ಮನೆಯವರಿಗೆ ಸಂಘದಿಂದ ಸಾಂತ್ವನ ನಿಧಿ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇತ್ತೀಚೆಗೆ ಅಕಾಲಿಕವಾಗಿ ಅಗಲಿದ ಬೆಳ್ತಂಗಡಿ ಜೂನಿಯರ್ ಕಾಲೇಜು ಬಳಿಯ ನಿವಾಸಿ, ಹಿರಿಯ ಕಾರು ಚಾಲಕ ದಿ. ವಾಸು ಸಪಲ್ಯ ಅವರ ಮನೆಗೆ ದ. ಕ ಜಿಲ್ಲಾ ವಾಹನ ಚಾಲಕ ಮಾಲಕರ ಕ್ಷೇಮಾಭಿವೃದ್ಧಿ ವೇದಿಕೆ ಪದಾಧಿಕಾರಿಗಳು ಭೇಟಿ ನೀಡಿ‌ ಮನೆಯವರಿಗೆ 5 ಸಾವಿರ ರೂ. ಸಾಂತ್ವನ ನಿಧಿ ಹಸ್ತಾಂತರಿಸಿದರು.

ಸೆ. 7 ರಂದು‌ ಅವರ ಮನೆಯಲ್ಲಿ ಮೃತರ ಪತ್ನಿ ಗಾಯತ್ರಿ ಅವರಿಗೆ ಸಂಘದ ಅಧ್ಯಕ್ಷ ಸುರೇಶ್ ಭಟ್ ಎರ್ಮಾಜೆ ಅವರು‌ ದೇಣಿಗೆಯ ಚೆಕ್ ನೀಡಿದರು. ಈ‌ ವೇಳೆ ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ನಾಯ್ಕ್, ಮಾಜಿ ಕಾರ್ಯದರ್ಶಿ ರಝಾಕ್ ಮತ್ತು ಸದಸ್ಯರುಗಳಾದ ನೂರುದ್ದೀನ್, ಸೈಫಲಿ ಇವರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.