ಗುರುವಾಯನಕೆರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಕೆರೆಯ ಸುತ್ತಮುತ್ತ ಸ್ವಚ್ಛತಾ ಕಾರ್ಯ

ಗುರುವಾಯನಕೆರೆ: ಗುರುವಾಯನಕೆರೆ ಪೇಟೆಯ ಸಮೀಪ ಹೆದ್ದಾರಿ ಪಕ್ಕದಲ್ಲಿರುವ ಕೆರೆಯ ಸುತ್ತಮುತ್ತ ಬೆಳೆದಿರುವ ಕಳೆಗಿಡ ಗಂಟಿಗಳನ್ನು ತೆಗೆದು ಸ್ವಚ್ಛತಾ ಕಾರ್ಯವನ್ನು ಗುರುವಾಯನಕೆರೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ನಡೆಸಲಾಯಿತು.


ಈ ಸಂದರ್ಭ ಗಣೇಶೋತ್ಸವ ಸಮಿತಿಯ ಮುಂದಿನ ವರ್ಷದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಶಕ್ತಿನಗರ ಸಾಯಿರಾಮ್, ಗೌರವಾಧ್ಯಕ್ಷ ಅವಿನಾಶ್, ವಿಶ್ವಹಿಂದೂ ಪರಿಷತ್‌ನ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಪಣೆಜಾಲ್, ಭಜರಂಗದಳ ಸಂಚಾಲಕ ಕವನ್ ಕುಲಾಲ್, ಗಣೇಶ್ ಕುಲಾಲ್, ನವೀನ್ ಕುಲಾಲ್, ಜೀವನ್ ಕುಲಾಲ್, ಅಶೋಕ (ಮುದ್ದು) ಹಾಗೂ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಮಿತಿ ಪ್ರಮುಖರಾದ ಶಶಿರಾಜ್ ಶೆಟ್ಟಿ ಮತ್ತು ರಿಜೇಶ್ ಕುಮಾರ್ ಶ್ರಮದಾನ ಮಾಡುತ್ತಿರುವ ಸದಸ್ಯರಿಗೆ ಊಟದ ವ್ಯವಸ್ಥೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.