ಜೀವನ್ಮರಣದಲ್ಲಿದ್ದ ನಾಗರ ಹಾವಿನ ರಕ್ಷಣೆ

ಮುಂಡಾಜೆ,ಸೆ.6: ಹಿಂಗಾರವನ್ನು ಹರಡಿರುವ ಜಾಗದಿಂದ 15ಮೀ.ದೂರದಲ್ಲಿ ಸುಮಾರು 3 ಅಡಿ ಉದ್ದದ ನಾಗರ ಹಾವೊಂದು ಜೀವನ್ಮರಣ ಸ್ಥಿತಿಯಲ್ಲಿ ಕಂಡು ಬಂದಿದೆ.ಮೇಲ್ನೋಟಕ್ಕೆ ಯಾವುದೋ ವಾಹನ ಇದರ ಮೇಲೆ ಸಂಚರಿಸಿದಂತೆ ಕಂಡು ಬರುತ್ತಿದೆ.ಉರಗತಜ್ಞರ ಸಲಹೆ ಪ್ರಕಾರ ಮುಂಡಾಜೆಯ ಕಾರ್ಗಿಲ್ ವನದ ರೂವಾರಿ ಸಚಿನ್ ಭಿಡೆಯವರ ಸಹಕಾರದಲ್ಲಿ ಸ್ನೇಕ್ ಸುರೇಶ್ ಅವರು ತೀರಾ ಜರ್ಜರಿತ ಸ್ಥಿತಿಯಲ್ಲಿರುವ ನಾಗರಹಾವಿಗೆ ಶುಶ್ರೂಷೆ ನಡೆಸುತ್ತಿದ್ದಾರೆ.

ಸ್ಥಳದಲ್ಲಿ ಗೋಣಿಚೀಲ ಪತ್ತೆಯಾಗಿದ್ದು,ಬಲೆಯಲ್ಲಿ ಸಿಲುಕಿದ ಅಥವಾ ನಾಯಿಗಳ ದಾಳಿಗೆ ಗಾಯಗೊಂಡ ನಾಗರಹಾವನ್ನು ತಂದು ಬಿಟ್ಟಿರುವ ಸಾಧ್ಯತೆ ಇದೆ.ಈ ಬಗ್ಗೆ ಅರಣ್ಯ ಇಲಾಖೆಗೆ ಊರವರು ಮಾಹಿತಿ ನೀಡಿದ್ದಾರೆ. ಸೀಟು ಕಾಡು ರಸ್ತೆಯಲ್ಲಿ ಅಪರಿಚಿತರು ಮದ್ಯಪಾನ, ಧೂಮಪಾನ,ಫೋಟೋಗ್ರಫಿ ಮೊದಲಾದ ಮೋಜುಗಳಲ್ಲಿ ತೊಡಗಿರುವುದು ಸರ್ವೇ ಸಾಮಾನ್ಯ ವಿಚಾರವಾಗಿದೆ.ಈಗ ನಡೆದಿರುವ ಘಟನೆಗಳು ಈ ಪ್ರದೇಶದಲ್ಲಿ ಸಂಚರಿಸುವ ಜನರಲ್ಲಿ ಆತಂಕವನ್ನು ಹೆಚ್ಚಿಸಿವೆ.

ಮಂಗಳೂರು- ಚಿಕ್ಕಮಗಳೂರು ರಾಜ್ಯ ಹೆದ್ದಾರಿಯ ಬೆಳ್ತಂಗಡಿ ತಾ.ನ ಮುಂಡಾಜೆ ಗ್ರಾ.ಪಂ.ವ್ಯಾಪ್ತಿಯ ಸೀಟು ಎಂಬ ಕಾಡುಪ್ರದೇಶದ ರಸ್ತೆ ಬದಿಯಲ್ಲಿ ಅಡಿಕೆಯ ಹಿಂಗಾರ ಬಿಡುವ (ತುಳುವಿನ ಕುಬೆ) ಹಾಗೂ ಹಿಂಗಾರಗಳನ್ನು ಚಲ್ಲಾಪಿಲ್ಲಿಯಾಗಿ ಹರಡಿರುವ ಘಟನೆ ಶನಿವಾರ ತಡ ರಾತ್ರಿ ನಡೆದಿದೆ.ಅಡಿಕೆ ಮರಗಳನ್ನು ಕಡಿದು ಸಾಗಾಟ ನಡೆಸುವಾಗ ಅದರ ಹಿಂಗಾರ ಮತ್ತು ಹಿಂಗಾರ ಬೆಳೆಯುವ ಭಾಗಗಳನ್ನು ತೋಟಗಳಲ್ಲೆ ಸಾಮಾನ್ಯವಾಗಿ ವಿಲೇವಾರಿ ಮಾಡಲಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.