ಕನ್ಯಾಡಿ: ಬಿಜೆಪಿ ಬೂತ್ ಮಟ್ಟದ ಸಭೆ

ಕನ್ಯಾಡಿ ಗ್ರಾಮದ 32 ಬೂತ್ ಮಟ್ಟದ ಸಭೆಯು ಇಂದು ಗುರಿಪಳ್ಳ ಕನ್ಯಾಡಿ  ಮಹಾಶಕ್ತಿ ಕೇಂದ್ರದ ಹಾಗೂ ಭಾರತೀಯ ಜನತಾ ಪಾರ್ಟಿಯ ಸಂಘಟನಾ ಸಭೆಯು ಇಂದು ಲಾಯಿಲಾ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಅಜಿತ್ ಅರಿಗ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸದ್ಯಸರು ಸೌಮ್ಯಲತಾ ಜಯಂತ್ ಗೌಡ ಇವರ ಮನೆಯಲ್ಲಿ ನಡೆಯಿತು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ವಿನಯ ಸೇನರಬೆಟ್ಟು, ಲಾಯಿಲಾ ಉಸ್ತುವಾರಿ ಪ್ರಮುಖ್ ರತ್ನವರ್ಮಾ ಜೈನ್, ತಾಲೂಕು ರೈತ ಮೋರ್ಚಾ ಮಂಡಲ ಅಧ್ಯಕ್ಷ ಜಯಂತ್ ಗೌಡ ಗುರಿಪಳ್ಳ, ಯುವ ಮೋರ್ಚಾ ಉಪಾಧ್ಯಕ್ಷ ಪ್ರಮೋದ್ ದಿಡುಪೆ, ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

ಈ ಸಭೆಯಲ್ಲಿ ವಿವಿಧ ಮೋರ್ಚಾಗಳ ಬೂತ್ ಮಟ್ಟದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಗರಿಕರು ಕಾರ್ಯಕರ್ತ ಬಂದುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.