ರೋಟರಿ ಕ್ಲಬ್ ಬೆಳ್ತಂಗಡಿ :ವಿಶ್ವ ತೆಂಗು ದಿನಾಚರಣೆ

ಸೆಪ್ಟೆಂಬರ್ 2: ವಿಶ್ವ ತೆಂಗಿನ ದಿನಾಚರಣೆಯನ್ನು ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಪಡ್ಲಾಡಿ ಹಾಲು ಉತ್ಪಾದಕರ ಸಂಘ ,ಲಾಯಿಲ ಬೆಳ್ತಂಗಡಿ ಇವುಗಳ ಜಂಟಿ ಆಶ್ರಯದಲ್ಲಿ ನಡೆಸಲಾಯಿತು. ರೋಟರಿ ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್,ವಿಧಾನ ಪರಿಷತ್ ಸದಸ್ಯರೂ ಆಗಿರುವ ರೊ.ಪ್ರತಾಪ ಸಿಂಹ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮದ್ದಡ್ಕ ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಲಿಖಿತಾರಾಜ್ ಅವರು ತೋಟಗಾರಿಕಾ ಇಲಾಖೆಯಿಂದ ಕೃಷಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊ.ಧನಂಜಯ ರಾವ್ ಅವರು ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯರಾದ ರೊ.ಪ್ರತಾಪ ಸಿಂಹ ನಾಯಕ್ ಹಾಗೂ ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಲಿಖಿತರಾಜ್ ಅವರು ಬಂದಂತಹ ಕೃಷಿಕರಿಗೆ ತೆಂಗಿನ ಗಿಡಗಳನ್ನು ನೀಡಿದರು.

ಈ ಸಂಧರ್ಭದಲ್ಲಿ ರೊ.ಮೆ.ಜ.ಎಂ ವಿ.ಭಟ್,ರೊ.ಸುನೀಲ್ ಶೆಣೈ,ರೊ.ಯೋಗೀಶ್ ಭಿಡೆ,ರೊ.ಮಿಥುನ್ ಮಾಡ್ತಾ ,ರೊಟರಿ ಕ್ಲಬ್ ನ ಕಾರ್ಯದರ್ಶಿ ರೊ ಶ್ರೀಧರ ಕೆವಿ ಆ್ಯನ್ಸ್ ಕ್ಲಬ್ ಅಧ್ಯಕ್ಷೆ ಡಾ.ದೀಪಾಲಿ ಡೊಂಗ್ರೆ ಹಾಗೂ ಪಡ್ಲಾಡಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶ್ರೀಮತಿ ಕುಶಲ ಹಾಗೂ ಪರಿವಿಕ್ಷಕಾರಾದ ಗೀತಾ ಇವರುಗಳು ಉಪಸ್ಥಿತರಿದ್ದರು. ಪಡ್ಲಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶ್ರೀ ಗಿರಿಧರ ಪೂಜಾರಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು ಇತ್ತೀಚೆಗೆ ನಮ್ಮನಗಲಿದ ಮಾಜಿ ರಾಷ್ಟ್ರಪತಿ ಭಾರತ ರತ್ನ ಶ್ರಿ.ಪ್ರಣವ್ ಮುಖರ್ಜಿಯವರ ಸ್ಮರಣಾರ್ಥವಾಗಿ ನಡೆದ ಈ ಕಾರ್ಯಕ್ರಮದಲ್ಲಿ 175 ತೆಂಗಿನ ಗಿಡಗಳನ್ನು ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.