HomePage_Banner_
HomePage_Banner_

ಸಾಮಾಜಿಕ ಜಾಲತಾಣದಲ್ಲಿ ಮಾಜಿ ಶಾಸಕ ಬಂಗೇರರ ಅವಹೇಳನ ಕಾಮೆಂಟ್; ಕ್ಷಮೆಯಾಚಿಸಿದ ಆರೋಪಿ

ಬೆಳ್ತಂಗಡಿ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ.ವಸಂತ.ಬಂಗೇರರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ “ತರ್ಕಕ್ಕೆ ನಿಲುಕದ್ದು…! ವಸಂತ ಬಂಗೇರ ಮರಕಳ್ಳತನ, ಮರಳು ಮಾಫಿಯಾದಲ್ಲಿ ಅವರು ಹಾಗೂ ಸಹಚರರು‌ ಮಾಡಿದ ಹಣದಿಂದಾದರೂ ಬಡವರಿಗೆ ಕಿಟ್ ಹಂಚಬಹುದಿತ್ತು…ಮನಸ್ಸು ಯೋಗ್ಯತೆ ಬೇಕೇ?… ಎಂದು ಮತ್ತು ಇನ್ನೊಂದು ಕಡೆ “ಹೌದು ಮರಳು ಕಳ್ಳ ರಮಾನಾಥ ರೈ …. ಮರಕಳ್ಳ ಮಾಜಿ ಶಾಸಕ…ಇಬ್ಬರು ಕಳ್ಳರೇ.. ಅದೇ ನಿಮಗೆ ಎಮ್ಮೆ…ಜೈ ಕೊಂಗ್ರೇಶ್” ಎಂದು ಅವಹೇಳನಕಾರಿ ಕಾಮೆಂಟ್ ಹಾಕಿದ ಬಗ್ಗೆ ಬಂಗೇರರ ಸಂಬಂಧಿ  ಕಾಮೆಂಟ್ ಹಾಕಿದ ಕುತ್ಲೂರು ನಿವಾಸಿ ರಾಮ್ ಪ್ರಸಾದ್ ಎಂಬವರ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆ ಗೆ ದೂರು ನೀಡಿದ್ದರು. ಬೆಳ್ತಂಗಡಿ ಪೊಲೀಸರು ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದು, ಮುಂದೆ ಈ ರೀತಿ ತಪ್ಪುಗಳನ್ನು ಮಾಡುವುದಿಲ್ಲ ಎಂದು ಮುಚ್ಚಿಳಿಕೆ ಬರೆದುಕೊಟ್ಟಿದ್ದು, ಪೊಲೀಸರು ಸೂಕ್ತ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ‌ ಎಂದು ವರದಿಯಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.