ತಾಲೂಕಿನ ಮೂವರು ಶಿಕ್ಷಕಿಯರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಬೆಳ್ತಂಗಡಿ: ಪ್ರಸ್ತುತ ಸಾಲಿನ ಜಿಲ್ಲಾ‌ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ‌ ಮೂರು ಮಂದಿ ಶಿಕ್ಷಕಿಯರು ಭಾಜನರಾಗಿದ್ದಾರೆ.

ಸರಕಾರಿ ಹಿ.ಪ್ರಾ ಶಾಲೆ ರಕ್ತೇಶ್ವರಿಪದವು ಸಹಶಿಕ್ಷಕಿ ಚೈತ್ರಪ್ರಭಾ, ಸ.ಉನ್ನತೀಕರಿಸಿದ ಹಿ.ಪ್ರಾ ಶಾಲೆ ಕುಂಜತ್ತೋಡಿಯ ಸಹಶಿಕ್ಷಕಿ ಸಬೀನಾ ಮತ್ತು ಸ. ಪ್ರೌಢ ಶಾಲೆ ಕೊಕ್ರಾಡಿ ಶಿಕ್ಷಕಿ ಅಕ್ಕಮ್ಮ ಅವರಿಗೆ ಪ್ರಶಸ್ತಿಗಳು ಘೋಷಣೆಯಾಗಿದೆ. ಸೆ. 5 ರ ಶಿಕ್ಷಕರ ದಿನಾಚರಣೆಯಂದು ಜಿಲ್ಲಾಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಮೂವರೂ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.