ಆಫ್ರಿಕನ್ ಬಸವನ ಹುಳು ಬಾದೆಯ ಬಗ್ಗೆ ತೋಟಗಾರಿಕೆ ಸಚಿವರಾದ ನಾರಾಯಣ ಗೌಡರಿಗೆ ಶಾಸಕ ಹರೀಶ್ ಪೂಂಜಾ ಮನವಿ

ಬೆಳ್ತಂಗಡಿ ತಾಲೂಕಿನ  ಉರುವಾಲು, ಕಣಿಯೂರು, ಮಚ್ಚಿನ, ತಣ್ಣೀರುಪಂಥ ಗ್ರಾಮದ ಕೃಷಿಭೂಮಿಯಲ್ಲಿ ಆಫ್ರಿಕನ್ ಬಸವನ ಹುಳಗಳ ಭಾದೆಯ ಬಗ್ಗೆ ತೋಟಗಾರಿಕೆ ಸಚಿವರಾದ ಕೆ ಸಿ ನಾರಾಯಣ ಗೌಡರನ್ನು ಭೇಟಿ ನೀಡಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಮನವಿ ಸಲ್ಲಿಸಿದರು.

ಸುಮಾರು 200 ಎಕರೆಗೂ ಕೃಷಿ ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಫ್ರಿಕನ್ ಬಸವನ ಹುಳ ಬಾದೆಯು ವಿಪರೀತವಾಗುತ್ತಿದೆ ಇದರಿಂದ ಬೆಳೆದ ಕೃಷಿ ಬೆಳೆಯು ನಾಶವಾಗಿ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿರುವುದರಿಂದ ತೋಟಗಾರಿಕೆ ಇಲಾಖೆಯಿಂದ ಶೀಘ್ರವಾಗಿ ನುರಿತ ಸಸ್ಯ ವಿಜ್ಞಾನಿಗಳು ಹಾಗೂ ಅಧಿಕಾರಿಗಳ ತಂಡವನ್ನು ಈ ಬಸವನ ಹುಳು ಸಮಸ್ಯೆಗೆ ಮುಕ್ತಿ ದೊರಕಿಸಿಕೊಡುವಂತೆ ಮತ್ತು ರೈತರ ಮನವಿ ಪತ್ರದ ಸಮೇತ ಸಚಿವರಿಗೆ ಮನವಿ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.