HomePage_Banner_
HomePage_Banner_

ವೈಯಕ್ತಿಕ ಹಣಕಾಸು ಮತ್ತು ಹಣ ನಿರ್ವಹಣೆ ಕುರಿತು ರಾಷ್ಟ್ರ ಮಟ್ಟದ ವೆಬಿನಾರ್

ಸೇಕ್ರೆಡ್ ಹಾರ್ಟ್ ಕಾಲೇಜಿನ ಎಂ ಕಾಂ ವಿಭಾಗವು ಆ.28 ರಂದು ‘ವೈಯಕ್ತಿಕ ಹಣಕಾಸು ಮತ್ತು ಹಣ ನಿರ್ವಹಣೆ’ ಎಂಬ ವಿಷಯದ ಕುರಿತು ರಾಷ್ಟ್ರಮಟ್ಟದ ವೆಬಿನಾರ್ ಆಯೋಜಿಸಿತು.ಸ್ವತಂತ್ರ ತರಬೇತುದಾರ, ಹೂಡಿಕೆ ಸೇವಾ ವೃತ್ತಿಪರ,ಮತ್ತು ಟೋಸ್ಟ್ ಮಾಸ್ಟರ್ಸ್ ಇಂಟರ್ನ್ಯಾಷನಲ್ ಕ್ಲಬ್ನ ಪ್ರಧಾನ ನಿರ್ದೇಶಕಿಯಾದ ಸಪ್ನಾ ಶೆಣೈ ಯವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ಪಿ.ಜಿ ವಿಭಾಗದ ಉಪನ್ಯಾಸಕರಾದ ನೆಲ್ಸನ್ ಮೋನಿಸ್ ರವರು ಸಪ್ನಾ ಶೆಣೈ ಯವರನ್ನು ಸ್ವಾಗತಿಸಿ ಪರಿಚಯಿಸಿದರು. ವೈಯಕ್ತಿಕ ಹಣಕಾಸು ಪ್ರಾಮುಖ್ಯತೆ, ಷೇರು ಮತ್ತು ಸಾಲಗಳ ನಡುವಿನ ವ್ಯತ್ಯಾಸ ಮತ್ತು ಉಳಿತಾಯವನ್ನು ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ ಆಧಾರದ ಮೇಲೆ ಯಾವ ರೀತಿ ಹೂಡಿಕೆ ಮಾಡಬೇಕೆಂಬುದರ ಬಗ್ಗೆ ಸಂಪನ್ಮೂಲ ವ್ಯಕ್ತಿ ವಿವರಿಸಿದರು. ವಿವಿಧ ಉದಾಹರಣೆಗಳನ್ನು ನೀಡುವ ಮೂಲಕ ವಿವಿಧ ಖಾತೆಗಳಿಂದ ಬರುವ ಆದಾಯವನ್ನು ಮತ್ತು ಗಳಿಸಿದ ಹಣವನ್ನು ನಿರ್ವಹಿಸುವುದರ ಬಗ್ಗೆ ವಿವರಿಸಿದರು. ಅವರು ಭದ್ರತಾ ಮಾರುಕಟ್ಟೆಯ ಏರಿಳಿತದ ಬಗ್ಗೆಯೂ ತಿಳಿಸಿದರು.

ಒಂದೂವರೆ ಗಂಟೆಗಳ ಕಾಲ ನಡೆದ ವೆಬಿನಾರ್ ಕಾರ್ಯಕ್ರಮ ಬಹಳ ಉತ್ತಮವಾಗಿ ಮೂಡಿಬಂತು. ಕಾರ್ಯಕ್ರಮದಲ್ಲಿ 140 ಕ್ಕೂ ಹೆಚ್ಚು ಆಸಕ್ತ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು. ಮತ್ತು ಪ್ರೇಕ್ಷಕರಿಂದ ದೊಡ್ಡ ಮೆಚ್ಚುಗೆಯನ್ನು ಪಡೆಯಿತು.ಪ್ರಸ್ತುತ ವಿಷಯದ ಬಗ್ಗೆ ಪ್ರಶ್ನೆ ಮತ್ತು ಉತ್ತರಗಳ ಚರ್ಚೆ ನಡೆಯಿತು.ರಾಬಿನ್ ಮತ್ತು ಎಮರ್ಸನ್ ಇವರು ವೆಬಿನಾರನ್ನು ಸಂಯೋಜಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ನೆಲ್ಸನ್ ಮೋನಿಸ್ ಇವರು ಧನ್ಯವಾದ ಸಮರ್ಪಣೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.