HomePage_Banner_
HomePage_Banner_

ರೈತರ ಕ್ಷೇತ್ರ ಪಾಠಶಾಲೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಕಳೆಂಜ: ಕೃಷಿ ಇಲಾಖೆ ಬೆಳ್ತಂಗಡಿ ಇದರ ವತಿಯಿಂದ 2020-21ನೇ ಸಾಲಿನ ಆತ್ಮ ಯೋಜನೆಯಡಿ ರೈತರ ಕ್ಷೇತ್ರ ಪಾಠಶಾಲೆಯ ಮೂರನೆಯ ತರಬೇತಿ ಕಾರ್ಯಕ್ರಮವು ಕೊಕ್ಕಡ ಹೋಬಳಿಯ ಕಳೆಂಜ ಗ್ರಾಮದ ಮೂಡಾಯಿಮಜಲು ಮನೆಯ ಪ್ರಗತಿಪರ ಕೃಷಿಕರಾದ ನೀಲಯ್ಯ ಗೌಡರ ಮನೆಯಲ್ಲಿ ಸೆ.1 ರಂದು ನಡೆಯಿತು.

ಕಾರ್ಯಕ್ರಮವನ್ನು ರುಕ್ಮಯ ಗೌಡ ಬರೆಮೇಲು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀಲಯ್ಯ ಗೌಡರು ವಹಿಸಿದ್ದರು .ಬೆಳ್ತಂಗಡಿಯ ಕೃಷಿ ಅಧಿಕಾರಿಗಳಾದ  ಚಿದಾನಂದ ಹೂಗಾರ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು .ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಂಗಳೂರಿನ ಕೆ ವಿ ಕೆ ಯ ಸಸ್ಯ ಸಂರಕ್ಷಣಾ ವಿಭಾಗದ ವಿಜ್ಞಾನಿ ಡಾ.ಕೇದಾರನಾಥ್ ಭತ್ತದ ಬೆಳೆಯಲ್ಲಿ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆಯ ಕುರಿತು ರೈತರಿಗೆ ಅರ್ಥ ಆಗುವ ರೀತಿಯಲ್ಲಿ ಮಾಹಿತಿಯನ್ನು ನೀಡಿದರು .ಅದೇ ರೀತಿ ಕೆವಿಕೆ ಯ ಇನ್ನೋರ್ವ ಮೀನುಗಾರಿಕಾ ವಿಭಾಗದ ವಿಜ್ಞಾನಿ ಡಾ.ಚೇತನ್ ಕೂಡ ಮಾಹಿತಿಯನ್ನು ನೀಡಿದರು.

ಕ್ಷೇತ್ರ ಪಾಠಶಾಲೆಯಲ್ಲಿ ಮೇದಿನಿ ಫಾರ್ಮನ ಮಾಲಕರಾದ ಕೆ.ಶ್ರೀಧರ ರಾವ್ ,ಜನಾರ್ದನ ಗೌಡ ಮುಂಡೆತ್ತಿಲ ,ದೇಜಪ್ಪ ಗೌಡ ಮುಂಡೆತ್ತಿಲ ,ಭೋಜರಾಜ ಶೆಟ್ಟಿ ,ಸುಂದರ ಗೌಡ ಕೊತ್ತೋಡಿ ,ರಘುಚಂದ್ರ ಪೂಜಾರಿ , ಈರಪ್ಪ ಗೌಡ ಪಿಲ್ಯಡ್ಕ, ವಿಠಲ ಗೌಡ ಬದಿಮಾರು ಬಾಲಕೃಷ್ಣ ದೇವಾಡಿಗ ಹಾಗೂ ಇನ್ನೂ ಅನೇಕ ರೈತರು ಉಪಸ್ಥಿತರಿದ್ದರು. ಕು.ಲೋಕೇಶ್ವರಿ ಸುಶ್ರಾವ್ಯವಾಗಿ ಪ್ರಾರ್ಥನೆಯನ್ನು ಹಾಡಿದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರಾದ ಶರಣ್ ಸಹಕರಿಸಿದರು. ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಕು.ಚಂದ್ರ ಕಲಾ ಡಿ ಸಿ ಧನ್ಯವಾದವನ್ನು ಸಲ್ಲಿಸಿದರು .

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.