ಮೂಲ್ಯರ ಯಾನೆ ಕುಲಾಲರ ಸೇವಾ ಸಂಘ ಕಣಿಯೂರು ಘಟಕದಿಂದ ಸ್ವಚ್ಛತಾ ಕಾರ್ಯ

Advt_NewsUnder_1
Advt_NewsUnder_1
Advt_NewsUnder_1

ಕಣಿಯೂರು: ಇಲ್ಲಿಯ ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮವು ಆ.31ರಂದು ಉರುವಾಲು ಗ್ರಾಮದ ಹಲೇಜಿ ಬಸ್ಟ್ಯಾಂಡ್ ಪರಿಸರದಲ್ಲಿ ನಡೆಯಿತು.

ಕಳೆದ ಹಲವು ವರ್ಷಗಳಿಂದ ಊರವರ ಹಾಗೂ ಪಂಚಾಯತು ನಿರ್ಲಕ್ಷಕ್ಕೆ ಒಳಪಟ್ಟು ಬೀದಿನಾಯಿಗಳ ಗೂಡಾಗಿತ್ತು. ಬಸ್ ನಿಲ್ದಾಣದ ಸುತ್ತಮುತ್ತಲಿನ ಪರಿಸರ ಬಾಟಲಿ ಮತ್ತು ಪ್ಲಾಸ್ಟಿಕ್‌ಗಳಿಂದ ತುಂಬಿ ಗಬ್ಬು ವಾಸನೆ ಬರುತ್ತಿತ್ತು. ಮೂಲ್ಯರ ಯಾನೆ ಕುಲಾಲರ ಸಂಘ ಕಣಿಯೂರು ಇದರ ಸದಸ್ಯರು ಸೇರಿ ಸ್ವಚ್ಛಮಾಡಿ ಪ್ರಯಾಣಿಕರಿಗೆ ತಂಗಲು ಯೋಗ್ಯವಾಗುವಂತೆ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಉಮೇಶ್ ಪಿಲಿಗೂಡು, ಸಂಘಟನಾ ಕಾರ್ಯದರ್ಶಿ ಸುಧೀರ್. ಕೆ ಯನ್. ಹಲೇಜಿ, ಉಪಾಧ್ಯಕ್ಷ ಯಶೋಧರ ಅಂತರ,
ಕಾರ್ಯಕಾರಿಣಿ ಸದಸ್ಯರಾದ ಸೇಸಪ್ಪ ಮೂಲ್ಯ ಪಿಲಿಗೂಡು, ಉದಯ ಕಲ್ಲೇರಿ, ರಾಜೇಶ್ ಅಂತರ, ಸುರೇಶ್ ನಾಣಿಲು, ದಿನೇಶ್ ಅಂತರ, ಸಂಜೀವ್ ಮೂಲ್ಯ ಹಲೇಜಿ, ಅಶೋಕ್ ಬರಂಬು, ಅಶೋಕ್ ಹಲೇಜಿ, ಜ್ಯೋತಿ ಹಲೇಜಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.