ಬೆಳ್ತಂಗಡಿ: ಭಾರತ ರತ್ನ ಪ್ರಶಸ್ತಿ ವಿಜೇತ, ರಾಜಕೀಯದ ಹಿರಿಯ ಚೇತನ, ಮಾಜಿ ರಾಷ್ಟಪತಿ ದಿ. ಪ್ರಣವ್ ಮುಖರ್ಜಿಯವರಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಸೆ.1 ರಂದು ನುಡಿ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ. ಗಂಗಾಧರ ಗೌಡ, ಮಾಜಿ ಶಾಸಕ ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಕುರ್ತೋಡಿ ಮತ್ತು ರಂಜನ್ ಜಿ ಗೌಡ,ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಿ ಅಶ್ರಫ್ ನೆರಿಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಜಿರಾ, ಎಸ್ಸಿ ಘಟಕದ ಅಧ್ಯಕ್ಷ ಬಿ.ಕೆ ವಸಂತ, ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ಮಾಜಿ ನಾರಾಯಣ, ಜಿಲ್ಲಾಕಾಂಗ್ರೆಸ್ ಸದಸ್ಯ ಪ್ರಭಾಕರ ಶಾಂತಿಕೋಡಿ ಮತ್ತು ಜಗದೀಶ್ ಡಿ, ನ.ಪಂ ಸದಸ್ಯ ಜನಾರ್ದನ, ಪ್ರಮುಖರಾದ ಜಯವಿಕ್ರಮ ಕಲ್ಲಾಪು, ಚಂದು ಎಲ್, ಸುಂದರ ಗೌಡ ಹತ್ಯಡ್ಕ, , ಶಂಕರ ಹೆಗ್ಡೆ, ಮೆಹಬೂಬ್, ಐ.ಎಲ್ ಪಿಂಟೋ, ಮನೋಹರ ಇಳಂತಿಲ, ಅನಿಲ್ ಪೈ, ನಾಗರಾಜ ಲಾಯಿಲ, ಕೆ.ಎಸ್ ಅಬ್ದುಲ್ಲ, ಅಜಯ್ ಎ.ಜೆ, ಮೊದಲಾದವರು ಉಪಸ್ಥಿತರಿದ್ದರು.