HomePage_Banner_
HomePage_Banner_

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸೋಣಂದೂರು ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ

ಬೆಳ್ತಂಗಡಿ: SDPi ಸೋಣಂದೂರು, ಬ್ರಾಂಚ್ ವತಿಯಿಂದ ಆಯುಷ್ಮಾನ್ ಕಾರ್ಡ್, ಕೆಸಿಸಿ ಕಾರ್ಡ್, ವೋಟರ್ ಐಡಿ ಸೇರ್ಪಡೆ, ತಿದ್ದು ಪಡಿ ಹಾಗೂ ವರ್ಗಾವಣೆ ನೋಂದಣಿ ಅಭಿಯಾನ ಕಾರ್ಯಕ್ರಮವು ಆ-31 ರಂದು ಪಣಕಜೆ ಮಸೀದಿ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ SDPI ರಾಜ್ಯ ಸಮಿತಿ ಸದಸ್ಯರಾದ ರಿಯಾಜ್ ಫರಂಗಿಪೇಟೆ ಉಪಸ್ಥಿತರಿದ್ದರು. ಪಣಕಜೆ ಮಸೀದಿ ಖತೀಬರಾದ ಬಹುll ಜನಾಬ್ ಅಬ್ಸರ್ ಫೈಝಿ ದುಆ ನೆರವೇರಿಸಿ, SDPi ಬೆಳ್ತಂಗಡಿ ವಿಧಾನ ಸಭಾ ಸಮಿತಿ ಸದಸ್ಯರಾದ ನಿಜಾಮ್ ಗೇರುಕಟ್ಟೆ, ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ SDPi ಸೋಣಂದೂರು ಬ್ರಾಂಚ್ ವಲಯ ಅಧ್ಯಕ್ಷರಾದ ನೌಷನ್ ಪಣಕಜೆ, PFI ಪುಂಜಾಲಕಟ್ಟೆ ವಲಯ ಅಧ್ಯಕ್ಷರಾದ ಹನೀಫ್ ಬೋರುಗುಡ್ಡೆ, ಪಣಕಜೆ ಮಸೀದಿ ಅಧ್ಯಕ್ಷರು ಶಮೀರ್ ಪಣಕಜೆ,ಯಂಗ್ಮೆನ್ಸ್ ಅಧ್ಯಕ್ಷರು ರಮೀಜ್ ಪಣಕಜೆ, ಹಾಗೂ ಇಸ್ಮಾಯಿಲ್ ಪಣಕಜೆ ಉಪಸ್ಥಿತರಿದ್ದರು. SDPi ಸೋಣಂದೂರು ಬ್ರಾಂಚ್ ಕಾರ್ಯದರ್ಶಿ ರಿಯಾಜ್ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿದರು. ಅಭಿಯಾನದಲ್ಲಿ ಸುಮಾರು 255 ಮಂದಿ ಸಾರ್ವಜನಿಕರು ಪ್ರಯೋಜನ ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.