ರಬ್ಬರ್ ಕಾರ್ಮಿಕರ ಸಮಾಲೋಚನೆ ಸಭೆ

ಬೆಳ್ತಂಗಡಿ ಅವಿಭಜಿತ ದ.ಕ. ಹಾಗೂ ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮಜ್ದೂರ್ ಸಂಘ ಇದರ ವತಿಯಿಂದ ರಬ್ಬರ್ ಕಾರ್ಮಿಕರ ಸಮಾಲೋಚನೆ ಸಭೆ ಹಾಗೂ ಕಾರ್ಮಿಕ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ಉಜಿರೆ ಶಾರದಾ ಮಂಟಪದಲ್ಲಿ ಜರುಗಿತು. ಈ ಸಂದರ್ಭದಲ್ಲಿ ರಬ್ಬರ್ ಟ್ಯಾಪರ್ ಮಜ್ದೂರ್ ಸಂಘ ಇದರ ನಿಯೋಜಿತ ಅಧ್ಯಕ್ಷರಾದ ಸುರೇಶ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿ ಎಂ ಎಸ್ ನ ತಾಲೂಕು ಸಮಿತಿಯ ಅಧ್ಯಕ್ಷರಾದ ಉದಯ ಬಿಕೆ ಅವರು ಸರಕಾರದಿಂದ ಸಿಗುವ ಸೌಲಭ್ಯಗಳು ಸುಲಭವಾಗಿ ಪಡೆಯಲು ಸಂಘಟನೆಯಿಂದ ಸಾಧ್ಯವಾಗುತ್ತದೆ.

ಈ ನಿಟ್ಟಿನಲ್ಲಿ ಉಭಯ ಜಿಲ್ಲೆಗಳಲ್ಲಿ ಇರುವ ರಬ್ಬರ್ ಟ್ಯಾಪರ್ ಕಾರ್ಮಿಕರಿಗೆ ಈ ಸಂಘದಿಂದ ಪ್ರಯೋಜನವಾಗಲಿದೆ ಮತ್ತು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಕಾರ್ಮಿಕರು ಪಡೆದುಕೊಳ್ಳಲು ಜಾಗೃತಿ ಮಾಡುವುದು ಅವಶ್ಯಕ ವಾಗಿದೆ ಶೋಷಿತ ಕಾರ್ಮಿಕ ವರ್ಗವನ್ನು ಮೇಲೆತ್ತುವುದೇ ಈ ಸಂಘಟನೆಯ ಧ್ಯೇಯವಾಗಿರಲಿ ಹಾಗೂ ಈ ಮೂಲಕ ಕಾರ್ಮಿಕರ ಹಿತಾಸಕ್ತಿಗೆ ದುಡಿಯುವಂತಹ ಸಂಘಟನೆಯಾಗಲಿ ಎಂದು ಆಶಿಸಿದರು.

ಈ ಸಂದರ್ಭ ಆರ್ಥಿಕ ಸಾಕ್ಷರತಾ ಸಮಿತಿ ಅಮೂಲ್ಯ ಬೆಳ್ತಂಗಡಿ ಇದರ ಸಮಾಲೋಚಕರಾದ ಶ್ರೀಮತಿ ಉಷಾ ನಾಯಕ್ ಅವರು ಕಾರ್ಮಿಕರಿಗಿರುವ ಸರ್ಕಾರಿ ಸೌಲಭ್ಯಗಳು ಆಯುಷ್ಮಾನ್ ಕಾರ್ಡ್, ಪ್ರಧಾನ ಮಂತ್ರಿ ಶ್ರಮಯೋಗಿ ಪಿಂಚಣಿ ಯೋಜನೆ ಮತ್ತು ಇತರ ಇನ್ಶೂರೆನ್ಸ್ ಯೋಜನೆಗಳು ಮತ್ತು ಸಬ್ಸಿಡಿ ಸಹಿತ ಸಾಲ ಸೌಲಭ್ಯಗಳು ಇದರ ಬಗ್ಗೆ ವಿವರವಾದ ಮಾಹಿತಿಗಳನ್ನು ತಿಳಿಸಿ ಕೊಟ್ಟು ಇದನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ನಂತರ ಬಿ.ಎಂ.ಎಸ್ ನ ತಾಲೂಕು ಕಾರ್ಯದರ್ಶಿಗಳಾದ ಜಯರಾಜ್ ಸಾಲಿಯಾನ್ ಸಂಘಟನೆಯ ಉದ್ದೇಶಗಳ‌ ಬಗ್ಗೆ ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಬಂಟ್ವಾಳ ,ಪುತ್ತೂರು, ಕಡಬ, ಸುಳ್ಯ,ಕುಂದಾಪುರದ ಕಾರ್ಮಿಕ ಪ್ರತಿನಿಧಿಗಳು ಹಾಜರಿದ್ದು ಜಿಲ್ಲಾ ಕಾರ್ಯಕಾರಿ ಸಮಿತಿಗೆ ಅಯ್ಕೆ ಪ್ರಕ್ರೀಯೆ ನಡೆಯಿತು.ಈ ಸಂದರ್ಭದಲ್ಲಿ ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಸ್ಥಾಪಕ ಅಧ್ಯಕ್ಷರಾದ ಸೆಲ್ವದೋರೆ ,ಉಪಾದ್ಯಕ್ಷರಾದ ಶಂಕರ್ ಕುಂದಾಪುರ, ಹಾಗೂ ಕಾರ್ಯದರ್ಶಿ ನಾಗರಾಜ ಮಾಚಾರು, ನಾಗೇಂದ್ರ ಭುವನೇಶ್ವರ, ರಾಜ ಮಾಚಾರು ,ಸೆಂಥಿಲ್ ಕುಮಾರ್ ಕಡಬ ಉಪಸ್ಥಿತರಿದ್ದರು ಕಾವ್ಯ,ದಿವ್ಯ, ಪ್ರತೀಕ್ಷಾ ಪ್ರಾರ್ಥಿಸಿ ದರು.ಜನಾರ್ದನ ಕಾನರ್ಪ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.