HomePage_Banner_
HomePage_Banner_

ಕರ್ನೋಡಿ: ಹಳೆವಿದ್ಯಾರ್ಥಿ ಸಂಘದಿಂದ ಗೌರವಾರ್ಪಣೆ

ಬೆಳ್ತಂಗಡಿ: ಕರ್ನೋಡಿ ಸ.ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ ಸಂಘದಿಂದ ಇತ್ತೀಚೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ‌ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಗೌರವಾರ್ಪಣೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ, ಸಂಘದ ಅಧ್ಯಕ್ಷರಾದ ವಿಶ್ವನಾಥ್ ಲಾಯಿಲಾ ಅವರು ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ 598 ಅಂಕಗಳಿಸಿದ ಗುರುವಾಯನಕೆರೆ ಸ.ಪ್ರೌ. ಶಾಲೆಯ ವಿದ್ಯಾರ್ಥಿ ಹಾಗೂ ಕರ್ನೋಡಿ ಶಾಲೆಯ ಹಳೆ ವಿದ್ಯಾರ್ಥಿ ತೇಜಸ್ ಅವರನ್ನು ‌ಗೌರವಿಸಿದರು.‌

ತಾ.ಪಂ. ಸದಸ್ಯ ಸುಧಾಕರ್ ಬಿ.ಎಲ್, ಹಳೆ‌ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ‌ಸುರೇಶ್ ಶೆಟ್ಟಿ, ಸಂಘದ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು. ಸಂಘದ ‌ಸ್ಥಾಪಕಾಧ್ಯಕ್ಷ ಅಡ್ವೊಕೇಟ್ ಸಂತೋಷ್ ಕುಮಾರ್ ಲಾಯಿಲಾ ಅಭಿನಂದನಾ ಭಾಷಣ ಮಾಡಿದರು. ಶಿಕ್ಷಕ‌‌ ಕೃಷ್ಣ ಕುಮಾರ್ ಪ್ರಾಸ್ತಾವಿಕವಾಗಿ‌ ಮಾತನಾಡಿದರು. ಮುಖ್ಯಶಿಕ್ಷಕ ಜಗನ್ನಾಥ್ ಸ್ವಾಗತಿಸಿದರು. ಶಾಲಾ‌ಶಿಕ್ಷಕಿ ಗಂಗಾರಾಣಿ ಜೋಷಿ ನಿರೂಪಿಸಿ, ಸಂಘದ ಕಾರ್ಯದರ್ಶಿ ‌ಪ್ರಶಾಂತ್ ಲಾಯಿಲಾ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.