ಬೆಳ್ತಂಗಡಿ; ರಾಷ್ಟ್ರೀಯ ಕ್ರೀಡಾ ದಿನದ ಮುನ್ನಾದಿನದಂದು ರೋಟರಿ ಕ್ಲಬ್ ಬೆಳ್ತಂಗಡಿ ಸದಸ್ಯರಿಗೆ ಆಯೋಜಿಸಲಾದ ಬ್ಯಾಡ್ಮಿಂಟನ್ ಪಂದ್ಯಾವಳಿಯ ಉದ್ಘಾಟನೆಯನ್ನು ರಾಷ್ಟ್ರೀಯ ಮಟ್ಟದ ಕಬಡ್ಡಿ ರೆಫ್ರೀ ಜಯರಾಜ್ ಜೈನ್ ಮತ್ತು ಹಿಂದಿನ ಅಧ್ಯಕ್ಷ ರೊ ಸುಧೀರ್ ಪ್ರಭು ಇತರ ಸದಸ್ಯರೊಂದಿಗೆ ನೆರವೇರಿಸಿದರು.
ಬ್ಯಾಡ್ಮಿಂಟನ್ ಡಬಲ್ಸ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ರೊ ಡಾ. ಸಾತ್ವಿಕ್ ಜೈನ್ ಮತ್ತು ರೊ ಯೋಗೀಶ್ ಭಿಡೆ, ದ್ವಿತೀಯ ಸ್ಥಾನವನ್ನು ರೊ . ಶ್ರವಣ್ ಕಾಂತಜೆ ಮತ್ತು ರೊ ಬಿ ಕೆ ಧನಂಜಯ ರಾವ್ ಗಳಿಸಿದರು. ಪಂದ್ಯವನ್ನು ಆಯೋಜಿಸುವಲ್ಲಿ ಸಹಕರಿಸಿದ ರೊಶ್ರವಣ್ ಕಾಂತಜೆ ಮತ್ತು ರೊ ಯೋಗೀಶ್ ಭಿಡೆಯವರಿಗೆ ಧನ್ಯವಾದ ಸಲ್ಲಿಸಿದರು.