ಬೆಳಾಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಉಜಿರೆ ವಿಭಾಗದ ಬಜಿಲದಲ್ಲಿ ಕೃಷಿ ತರಬೇತಿ ಕಾರ್ಯಕ್ರಮ ಆ.30 ರಂದು ಬೆರ್ಕೆ ಚಂದಪ್ಪ ಗೌಡರ ಮನೆಯಲ್ಲಿ ನಡೆಯಿತು.
ತರಕಾರಿ ಕೃಷಿಯಲ್ಲಿ ಅನುಭವವಿರುವ ಚಂದಪ್ಪ ಗೌಡರು ಮಿಶ್ರ ಕೃಷಿ ಬೇಸಾಯ, ನರ್ಸರಿ, ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ ನೀಡಿದರು.ಬಜಿಲ ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡ, ಉಜಿರೆ ವಲಯ ಮೇಲ್ವಿಚಾರಕಿ ಅಶ್ವಿತಾ ಕೆ, ಕೃಷಿ ಅಧಿಕಾರಿ ಹರಿಪ್ರಸಾದ್, ಕೊಯ್ಯೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಸ್ವ- ಸಹಾಯ ಸಂಘದ ಸದಸ್ಯರು ಹಾಜರಿದ್ದರು.