ಶ್ರೀ ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ವತಿಯಿಂದ 2019 – 20ನೇ ಸಾಲಿನ SSLC ವಾರ್ಷಿಕ ಪರೀಕ್ಷೆಯಲ್ಲಿ ಸರಕಾರಿ ಪ್ರೌಢ ಶಾಲಾ ವಿಭಾಗದಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕೊಯ್ಯೂರು ಗ್ರಾಮದ ಬಜಿಲ ನಿವಾಸಿ ಗೋಪಾಲ ಗೌಡರ ಪುತ್ರಿ ಕು.ಶೈವಿ ಇವರನ್ನು ಸನ್ಮಾನಿಸಿಲಾಯಿತು.
ಕ್ಷೇತ್ರದ ಧರ್ಮದರ್ಶಿಯವರಾದ ಹರೀಶ್ ಆರಿಕೋಡಿ, ಕ್ಷೇತ್ರದ ಯಜಮಾನರಾದ ಡೊಂಬಯ್ಯ ಗೌಡ, ಮತ್ತು ವಸಂತ ಗೌಡ ಆರಿಕೋಡಿ ಶಾಲು ಹೊದಿಸಿ, ಫಲಪುಷ್ಪ ಮತ್ತು ಚಾಮುಂಡೇಶ್ವರಿ ದೇವಿಯ ಸ್ಮರಣಿಕೆ ನೀಡಿ ಆಶೀರ್ವದಿಸಿದರು.
ಈ ಸಂದರ್ಭ ವಿದ್ಯಾರ್ಥಿನಿ ತಂದೆ ಗೋಪಾಲ ಗೌಡ, ಶಿಕ್ಷಕ ಮಹೇಶ್, ದೈಹಿಕ ಶಿಕ್ಷಣ ಶಿಕ್ಷಕ ಧರ್ಮೇಂದ್ರ ಕುಮಾರ್, ಕ್ಷೇತ್ರದ ಕಛೇರಿ ವ್ಯವಸ್ಥಾಪಕರಾದ ಪ್ರಶಾಂತ್ ಕೊಯ್ಯೂರು, ಪುನೀತ್ ಕುಮಾರ್, ಉಪನ್ಯಾಸಕ ಬೆಳ್ಳಿಯಪ್ಪ ಗೌಡ, ರಮಿತ್ ಅರಣೆಮಾರ್, ಪ್ರಮೋದ್ ದಿಡುಪೆ, ಪ್ರಶಾಂತ್, ಕ್ಷೇತ್ರದ ಭಕ್ತಾದಿಗಳು, ಸೇವಕರು ಉಪಸ್ಥಿತರಿದ್ದು ವಿದ್ಯಾರ್ಥಿನಿ ಭವಿಷ್ಯಕ್ಕೆ ಶುಭ ಹಾರೈಸಿದರು.