ಭಾರತೀಯ ಕ್ರೀಡಾ ಲೋಕದ ದಂತಕತೆ ಹಾಗೂ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಇವರ ಹುಟ್ಟು ಹಬ್ಬದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್ ನಲ್ಲಿ ಆಚರಿಸಲಾಯಿತು.
ಒಳ ಕ್ರೀಡಾಂಗಣದಲ್ಲಿ ಜರಗಿದ ಈ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಡಾ|| ಜೋಸೆಫ್ ಎನ್ ಎಮ್ ಇವರು ಧ್ಯಾನಚಂದ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುದರೊಂದಿಗೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಶ್ರೀ ಫ್ರಾನ್ಸಿಸ್ ವಿ ವಿ ಇವರು ದೀಪವನ್ನು ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.ಕಾರ್ಯಕ್ರಮದ ಸಂಘಟಕರು, ದೈಹಿಕ ಶಿಕ್ಷಣ ನಿರ್ದೇಶಕರೂ ಆದ ಶ್ರೀ ಪ್ರಕಾಶ್ ಡಿ’ ಸೋಜಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಪ್ರೊ ಅಲೆಕ್ಸ್ ಐವನ್ ಸಿಕ್ವೇರಾ ಇವರು ನೆರವೇರಿಸಿದರು.ಹಾಗೂ ಕಾರ್ಯಕ್ರಮದ ವಿಶೇಷ ಮೆರುಗಾದ ಕಾಲೇಜಿನ ಹಿರಿಯ ಕ್ರೀಡಾ ಪಟುಗಳ ಪರಿಚಯವನ್ನು ಮಾಡಿಕೊಟ್ಟರು.ಕಾರ್ಯಕ್ರಮದಲ್ಲಿ ಹಲವು ಹಿರಿಯ ಕ್ರೀಡಾಪಟುಗಳು ಭಾಗವಹಿಸಿದ್ದರು. ಕ್ರೀಡಾ ದಿನಾಚರಣೆಯ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ಕೊನೆಗೆ ಶ್ರೀ ಎಮರ್ಸನ್ ಇವರು ವಂದಿಸಿದರು.
ಕ್ರೀಡಾ ದಿನಾಚರಣೆಯ ಈ ಕಾರ್ಯಕ್ರಮವನ್ನು ಶ್ರೀ ರಾಬಿನ್ ಜೋಸೆಫ್ ಸೆರಾ ಇವರು ನಿರ್ವಹಿಸಿದರು.