ಮಲೆಬೆಟ್ಟು ನಿವಾಸಿಯೊಬ್ಬ ಉಜಿರೆಯ ನಿನ್ನಿಕಲ್ಲು ಪರಿಸರದ ಯುವತಿಯೊಬ್ಬಳ ಲೈಂಗಿಕ ದೌರ್ಜನ್ಯ ಕ್ಕೆಯತ್ನಿಸಿ ಸಿಕ್ಕಿಬಿದ್ದಿದ್ದು, ಸಾರ್ವಜನಿಕರು ಭಾರೀ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.ಮಲೆ ಬೆಟ್ಟಿನ ಕಲ್ಲಿನ ಕೆಲಸ ಮಾಡುವ ಸಾದಿಕ್ ಎಂಬಾತ ನಿನ್ನಿಕಲ್ಲು ಪರಿಸರದ ರಸ್ತೆ ಬದಿಯಲ್ಲಿ ಆಡು ಮೇಯಿಸಲು ತೆರಳುತ್ತಿದ್ದ ಯುವತಿಯ ಮೇಲೆ ಕೈ ಹಾಕಿ ಎಳೆದುಕೊಂಡು ಹೋಗಲು ಯತ್ನಿಸಿದ್ದು, ಅಪಾಯ ಅರಿತ ಯುವತಿ ಜೋರಾಗಿ ಕಿರುಚಿಕೊಂಡಿದ್ದಾಳೆ.ಯುವತಿಯ ಬೊಬ್ಬೆ ಕೇಳಿ ಆಕೆಯ ಅಣ್ಣ ಸ್ಥಳಕ್ಕೆ ಧಾವಿಸಿದ್ದು, ಸಾದಿಕ್ ನನ್ನು ಹಿಡಿದುಕೊಂಡು ಬಲವಾಗಿ ಥಳಿಸಿದ್ದಾರೆ.ನಂತರ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಕರೆ ಮಾಡಿದ್ದು, ಅವರು ತಮ್ಮ ಕಾರಿನಲ್ಲಿ ಆರೋಪಿಯನ್ನು ಕರೆದೊಯ್ದಿದ್ದು, ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ
.ಹಾಡ ಹಗಲೇ ನಡು ರಸ್ತೆಯಲ್ಲೇ ದೌರ್ಜನ್ಯ ಕ್ಕೆ ಯತ್ನಿಸಿದ ಸಾದಿಕ್ ನ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.