ಚಾರ್ಮಾಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀಟಿಗೆಯಿಂದ ಮುಗುಳಿತಡ್ಕಕ್ಕೆ ಸಂಪರ್ಕ ಕಲ್ಪಿಸುವ ಹತ್ತಿರದ ದಾರಿಯಾದ ಕೊಳಂಬೆ ಎಂಬಲ್ಲಿ ಮುತ್ಯುಂಜಯ ನದಿಗೆ ಊರವರೇ ಸೇರಿ ಆ.28 ರಂದು ಯುವಕರು ಒಟ್ಟು ಗೂಡಿ ಕಾಲುಸಂಕ ನಿರ್ಮಿಸಿದರು.
ಮಳೆಗಾಲದಲ್ಲಿ ಮುಗುಳಿತಡ್ಕದ ಸುಮಾರು 50 ರಷ್ಟು ಕುಟುಂಬಗಳು ಚಾರ್ಮಾಡಿ, ಕಕ್ಕಿಂಜೆ ಪೇಟೆ, ಗ್ರಾಮ ಪಂಚಾಯತ್ ಕಛೇರಿಗೆ, ಗ್ರಾಮ ಕರಣಿ ಕಛೇರಿಗೆ, ಮಾರ್ಕೆಂಟ್, ಬ್ಯಾಂಕ್ ವ್ಯವಹಾರಗಳು, ಹೈನುಗಾರರಿಗೆ ಮಿಲ್ಕ್ ಸೊಸೈಟಿಗೆ, ಆಸ್ಪತ್ರೆ ಇತ್ಯಾದಿ ನಿತ್ಯ ವ್ಯವಹಾರಕ್ಕೆ ಬರಬೇಕಾದರೆ ಈ ಕಾಲು ಸಂಕದಿಂದಲೇ ಬರಬೇಕಾಗಿದೆ. ಸುತ್ತು ಬಳಿದು ಬರುವುದಾದರೆ ಅರಣೆ ಪಾದೆ ಸಮೀಪವಿರುವ ಕಿಂಡಿ ಅಣೆಕಟ್ಟೆ ಮೂಲಕ ಬರಬೇಕಾದರೆ ಸುಮಾರು 5 ಕಿ.ಮೀ ದೂರವಿದೆ. ಅಲ್ಲದೆ ಕಿಂಡಿ ಅಣೆಕಟ್ಟೆ ಕೂಡಾ ಉತ್ತಮ ಸ್ಥಿತಿಯಲ್ಲಿ ಇಲ್ಲ. ಕೊಳಂಬೆಯಲ್ಲಿ ಕಾಲುಸಂಕ ನಿರ್ಮಿಸಿದ ಕಾರಣ ಒಂದು ಕಿ.ಮೀ ದೂರ ನಡೆದು ಬಂದರೆ ಚಾರ್ಮಾಡಿ ಪೇಟೆ, ದೇವಸ್ಥಾನ ಕಕ್ಕಿಂಜೆ ಬರಬಹುದು.
ಕಾಲು ಸಂಕ ನಿರ್ಮಾಣದಲ್ಲಿ ಜಗದೀಶ್ ಮುಗುಳಿತಡ್ಕ, ರಾಜೇಶ್ ಮುಗುಳಿತಡ್ಕ, ಸುಂದರ ಗೌಡ, ಓಬಯ್ಯ ಗೌಡ, ವಿನೋದ್, ಹರೀಶ್ ಬರಮೇಲು, ದಿನೇಶ್ ಪಾದೆ ಹಾಗೂ ಆ ಭಾಗದವರು ಸಹಕರಿಸಿದ್ದರು.