ಮೂಡುಕೋಡಿ: ಮೂಡುಕೋಡಿ ಗ್ರಾಮದ ಪುತ್ತಿಲಕಜೆ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯ ಈಶ್ವರ ಪೂಜಾರಿ(81ವ) ರವರು ಆ.28 ರಂದು ನಿಧನರಾದರು.
ಮೃತರು ಉಳಿಬೈಲು, ಪಂಡಿಂಜೆ, ಉಂಬೆಟ್ಟು, ಮೂಡುಕೋಡಿ, ಅಂಡಿಂಜೆ ಮೊದಲಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 35 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು.
ಮೃತರು ಪತ್ನಿ ಮೀನಾಕ್ಷಿ ಹಾಗೂ ಮಕ್ಕಳಾದ ಯುವವಾಹಿನಿ ತಾಲೂಕು ಘಟಕದ ಮಾಜಿ ಅದ್ಯಕ್ಷ ಶ್ರೀ ಗುರು ನಾರಾಯಣ ಸೇವಾ ಸಂಘದ ಮಾಜಿ ಕಾರ್ಯದರ್ಶಿ ರಾಕೇಶ್ ಮೂಡಿಕೋಡಿ ಹಾಗೂ ಜೀವವಿಮಾ ಪ್ರತಿನಿಧಿ ರಾಜೇಶ್, ಕುಟುಂಬ ವರ್ಗದವರನ್ನು ಅಗಲಿದ್ದಾರೆ.