ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಗುರುದೇವ ಕಾಲೇಜಿನಲ್ಲಿ ತಮ್ಮ ಎರಡನೇ ಪಿಯುಸಿ ಅಧ್ಯಯನವನ್ನು ಮುಂದುವರಿಸಲು ನಾವೂರು ಗ್ರಾಮದ ಕುಮುದ ಮತ್ತು ಕುಸುಮಾ ಅವರಿಗೆ 5000 ರೂ.ಗಳ ಆರ್ಥಿಕ ಸಹಾಯವನ್ನು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಹಸ್ತಾಂತರಿಸಲಾಯಿತು. ಹಣಕಾಸಿನ ನೆರವನ್ನು ರೋಟರಿ ಬೋಧನಾ ನಿರ್ದೇಶಕರಾದ ರೋ.ಡಿಎಂ ಗೌಡರಿಂದ ಪ್ರಾಯೋಜಿಸಲ್ಪಟ್ಟಿತು. ಅಧ್ಯಕ್ಷ ರೊ ಧನಂಜಯ ರಾವ್ , ಕಾರ್ಯದರ್ಶಿ ರೊ ಶ್ರೀಧರ್ ಕೆ.ವಿ, ಸಹಾಯಕ ಗವರ್ನರ್ ರೊ ಯತಿಕುಮಾರ್ ಸ್ವಾಮಿ ಗೌಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.