ಎಸ್ ಎಸ್ ಎಲ್ ಸಿ ಸಾಧಕರಿಗೆ ರೋಟರಿ ಕ್ಲಬ್ ವತಿಯಿಂದ ಸನ್ಮಾನ

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ರಲ್ಲಿ 622 ಅಂಕಗಳನ್ನು ಗಳಿಸಿ ತಾಲೂಕು ಅಗ್ರಸ್ಥಾನ ಪಡೆದಿರುವ ಡಾ.ಶಶಿಕಾಂತ್ ಡೊಂಗ್ರೆ ಮತ್ತು ಆನ್ ದೀಪಾಲಿ ಡೊಂಗ್ರೆ ಅವರ ಪುತ್ರಿ ಕುಮಾರಿ ಶ್ರೇಯ ಡೋಂಗ್ರೆಯವರನ್ನು ಬೆಳ್ತಂಗಡಿ ರೋಟರಿ ಕ್ಲಬ್ ನಲ್ಲಿ ಸನ್ಮಾನಿಸಲಾಯಿತು.

ಅದೇ ರೀತಿ ಶೇಕಡಾ 96% ಅಂಕ ಪಡೆದಿರುವ ರೊ ಜಗದೀಶ್ ಪ್ರಸಾದ್ ಮತ್ತು ಆನ್ ಶೈಲಾ ಜಗದೀಶ್ ರವರ ಪುತ್ರ ಪ್ರಣವ್ ಪ್ರಸಾದ್ ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಬಿ ಕೆ ಧನಂಜಯ ರಾವ್, ಕಾರ್ಯದರ್ಶಿ ರೊ ಶ್ರೀಧರ್ ಕೆ ವಿ, ಸಹಾಯಕ ಗವರ್ನರ್ ಯತಿಕುಮಾರ ಸ್ವಾಮಿ ಗೌಡ, ಸಾಧಕರ ಹೆತ್ತವರು ಮತ್ತು ರೋಟರಿ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.