ಎಂ.ಆರ್.ಪಿ.ಎಲ್- ಅಲಿಂಕೊ‌ ಸಂಸ್ಥೆ ವತಿಯಿಂದ ವಿಕಲಾಂಗರಿಗೆ ಸಾಧನ ಸಲಕರಣೆ ವಿತರಣೆ

ಬೆಳ್ತಂಗಡಿ: ಕೃತಕ ಅಂಗಾಂಗ ತಯಾರಿಕಾ ಕಾರ್ಪೋರೇಷನ್ ಆಫ್ ಇಂಡಿಯಾ(ಅಲೊಂಕೋ) ಜಿಲ್ಲಾಡಳಿತ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಎಂ.ಆರ್.ಪಿ.ಎಲ್ ಮಂಗಳೂರು ದ.ಕ ಜಿಲ್ಲೆ, ಬೆಳ್ತಂಗಡಿ ತಾ.ಪಂ ಇದರ ಆಶ್ರಯದಲ್ಲಿ ದಿವ್ಯಾಂಗ ವ್ಯಕ್ತಿಗಳಿಗೆ ಕೃತಕ ಉಪಕರಣಗಳ ಸಾಧನಾ ಸಲಕರಣೆ ವಿತರಣಾ ಕಾರ್ಯಕ್ರಮ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಆ.28 ರಂದು ಜರುಗಿತು.

ಶಾಸಕ ಹರೀಶ್ ಪೂಂಜ 68 ಮಂದಿ ಫಲಾನುಭವಿಗಳಿಗೆ 150 ವಿವಿಧ ಸಲಕರಣೆಗಳ ವಿತರಣೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ ಕಲ್ಮಂಜ, ಸಿ.ಡಿ.ಪಿ.ಒ ಪ್ರಿಯಾ ಆಗ್ನೇಸ್, ತಾಲೂಕು ಸಂಯೋಜಕರು ಜೋನ್ ಬ್ಯಾಪ್ಟಿಸ್ಟ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.