ರಾಷ್ಟ್ರಮಟ್ಟದ ಆನ್ ಲೈನ್ ಜಲಸಾಕ್ಷರತೆ ಕಾರ್ಯಕ್ರಮ

ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ವತಿಯಿಂದ ಜಲಸಾಕ್ಷರತೆಯ ಬಗ್ಗೆ ರಾಷ್ಟ್ರಮಟ್ಟದ ಆನ್ ಲೈನ್ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಆ.26 ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಕಾಲೇಜು ಇಲ್ಲಿನ ಪ್ರಾಂಶುಪಾಲರಾದ ಡಾ ಜೋಸೆಫ್ ಎನ್ ಎಮ್ ಇವರು ಆನ್ ಲೈನ್ ಮೂಲಕ ಜಲಸಾಕ್ಷರತೆಯ ಬಗ್ಗೆ ಉಪನ್ಯಾಸ ನೀಡಿದರು.ಅವರ ಅಭಿಯಾನದ ಪ್ರಾಯೋಗಿಕ ಉದಾಹರಣೆಗಳ ಸಹಿತ ಮಳೆ ನೀರು ಕೊಯ್ಲು ಬಗ್ಗೆ ಮಾಹಿತಿ ನೀಡಿದರು.ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಭಾಗಿತ್ವದೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮವನ್ನು ಸೇಕ್ರೆಡ್ ಹಾರ್ಟ್ ಕಾಲೇಜು ಆಯೋಜಿಸಿತ್ತು.

ವಿವಿಧ ರಾಜ್ಯಗಳಿಂದ ಆಸಕ್ತ ವಿದ್ಯಾರ್ಥಿಗಳು, ಪರಿಸರ ಪ್ರಿಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕ ಆಲ್ವಿನ್ ಕೆ.ಜಿ ಇವರು ಸಂಯೋಜಿಸಿದರು.ಸ್ವಾಗತ ಭಾಷಣವನ್ನು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಪ್ರೊ.ಜೆ ಬಿ ಡಿಸೋಜ ಮಾಡಿದರು ಹಾಗೂ ಪ್ರೊ.ವಿನ್ಸೆಂಟ್ ಡಿಸೋಜ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮವನ್ನು ರಾಬಿನ್ ಜೋಸೆಫ್ ಸೆರಾ ನಿರೂಪಿಸಿದರು. ಡಾ ಜೋಸೆಫ್ ಎನ್ ಎಮ್ ರ ಜಲಸಾಕ್ಷರತೆ ಬಗ್ಗೆ ಇರುವ ಜ್ಞಾನ, ಅನುಭವ ಮತ್ತು ಹಮ್ಮಿಕೊಳ್ಳಲಾದ ಕಾರ್ಯಕ್ರಮದ ಕುರಿತು ಅನೇಕ ಜಲತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.