*ಆತ್ಮಹತ್ಯೆ ಶಂಕೆ, ಸ್ಥಳದಲ್ಲಿ ವಿಷದ ಬಾಟಲಿ ಪತ್ತೆ
ನಾವೂರು: ಖಾಸಗಿ ಸಂಸ್ಥೆಯೊಂದರ ಕೃಷಿಯಂತ್ರಧಾರೆಯಲ್ಲಿ ಕೃಷಿ ಯಂತ್ರ ಧಾರಾ ಯೋಜನೆಯ ಮೇನೇಜರ್ ಆಗಿ ಭಡ್ತಿ ಗೊಂಡು ಚನ್ನರಾಯಪಟ್ಟಣದಲ್ಲಿ 9 ದಿನಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿ ನಾಪತ್ತೆಯಾದ ಯುವಕನ ಶವ ತನ್ನ ಮನೆಯ ಸಮೀಪ ಕೆರೆಯಲ್ಲಿ ಪತ್ತೆಯಾದ ಘಟನೆ ಆ.28 ರಂದು ವರದಿಯಾಗಿದೆ.
ನಾವೂರು ಗ್ರಾಮದ ನಾಗಜೆ ನಿವಾಸಿ ದಿ। ಶೀನಪ್ಪ ಗೌಡ ಎಂಬವರ ಪುತ್ರ ರಕ್ಷಿತ್ (26ವ) ಸಾವನ್ನಪ್ಪಿದವರು. ಇವರು ಇದೇ ಸಂಸ್ಥೆಯಲ್ಲಿ ಪ್ರಥಮವಾಗಿ ಬೆಲೂರಿನಲ್ಲಿ, ನಂತರ ಬೆಳ್ತಂಗಡಿ ತಾಲೂಕಿನಲ್ಲಿ ಬಳಿಕ ಚಿಕಮಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಭಡ್ತಿ ಗೊಂಡು ಚೆನ್ನರಾಯಪಟ್ಟಣಕ್ಕೆ ವರ್ಗಾವಣೆಗೊಂಡು ಅಲ್ಲಿಗೆ ಹೋಗಿ ಕೆಲಸಕ್ಕೆ ಸೇರಿದ್ದು, ಕಳೆದ ಆ.22ರಂದು ಸೋಣ ಶನಿವಾರ ಆಚರಣೆಗೆ ಮನೆಗೆ ಬಂದಿದ್ದರು. ಆ. 24ರಂದು ಕೆಲಸಕ್ಕೆ ತೆರಳಿದ್ದರು. ಅದುವರೆಗೆ ಮನೆಯವರ ಜೊತೆ ಸಂಪಕ೯ದಲ್ಲಿದ್ದ ಅವರ ಮೊಬೈಲ್ ಆ. 26 ರಿಂದ ಸ್ವಿಚ್ ಆಫ್ ಆಗಿತ್ತು. ನಾವೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಗಣೇಶ್ ಗೌಡ ಹಾಗೂ ಮನೆಯಯವರು ಅವರನ್ನು ಹುಡುಕಿಕೊಂಡು ಚನ್ನರಾಯಪಟ್ಟಣಕ್ಕೆ ತೆರಳಿದ್ದರು.
ಈ ನಡುವೆ ಅವರ ಬೈಕ್ ಮನೆಯ ಕಾಡಿನ ಬಳಿ ಪತ್ತೆಯಾಗಿದ್ಧು, ಹುಡುಕಾಟಕ್ಕೆ ಹೋದವರು ಹಿಂತಿರುಗಿ ಬಂದಿದ್ದರು. ಆ.28ಬೆಳಿಗ್ಗೆ ಹತ್ತಿರದ ಸಂಜೀವ ಗೌಡ ಕೋಡಿ ಎಂಬವರ ಕೆರೆಯಲ್ಲಿ ಶವ ಪತ್ತೆಯಾಗಿದೆ. ಸ್ಥಳದಲ್ಲಿ ವಿಷದ ಬಾಟಲಿ ಪತ್ತೆಯಾಗಿದ್ಧು, ಅವರು ವಿಷ ತೆಗೆದುಕೊಂಡು, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಮೃತರು ತಾಯಿ , ಇಬ್ಬರು ತಮ್ಮಂದಿರನ್ನು ಅಗಲಿದ್ದಾರೆ.