ಧರ್ಮಸ್ಥಳ; ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ್ತದ ಸಂದರ್ಭದಲ್ಲಿ ಆ.27 ರಂದು ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಬೆಳಾಲು ಇಲ್ಲಿಯ ಪದಾಧಿಕಾರಿಗಳು ಶ್ರೀ ಗುರುದೇವ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯವರಿಂದ ಆಶೀರ್ವಚನ ಪಡೆದರು.
ಈ ಸಂದರ್ಭದಲ್ಲಿ ಬೆಳಾಲು ಶ್ರೀ ರಾಮ ಕ್ಷೇತ್ರ ಸಮಿತಿಯ ಸಂಚಾಲಕ ಸುರೇಂದ್ರ ಗೌಡ ಸುರುಳಿ, ಅಧ್ಯಕ್ಷ ಜಾರಪ್ಪ ಪೂಜಾರಿ, ಕಾರ್ಯದರ್ಶಿ ಸತೀಶ್ ಎಳ್ಳುಗದ್ದೆ, ಪದಾಧಿಕಾರಿಗಳಾದ ಪೆರಣ ಗೌಡ ಪರಾರಿ, ಗಂಗಾಧರ ಸಾಲಿಯನ್ ಎಂಜಿರಿಗೆ, ಶಿಲ್ಪಿ ಶಶಿಧರ ಆಚಾರ್ಯ, ದಾಮೋದರ ಕೊಲ್ಪಾಡಿ ಮೊದಲಾದವರು ಹಾಜರಿದ್ದರು.