ಬೆಳ್ತಂಗಡಿ: ಕನಸು ಮಾರಾಟಕ್ಕಿದೆ ಚಿತ್ರದ ಮೊದಲ ಟೀಸರ್ ನಲ್ಲೇ ಕುತೂಹಲ ಹುಟ್ಟಿಸಿರುವ ಚಿತ್ರ ತಂಡವು ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ರವರ ಕೈಯಿಂದ ಟೀಸರ್ ರಿಲೀಸ್ ಮಾಡಿಸಿದ್ದಾರೆ. ಟೀಸರ್ ನೋಡಿದ ಪ್ರೇಮ್ ರವರು ಸಿನೆಮಾ ಟೈಟಲ್ ಹಾಗೂ ಟೀಸರ್ ಬಗ್ಗೆ ಇಷ್ಟಪಟ್ಟು ಹೊಗಳಿಕೆಯ ನುಡಿಗಳನ್ನಾಡಿದರು.
ಸ್ಮಿತೇಶ್ ಎಸ್ ಬಾರ್ಯ, ನಿರ್ದೇಶನದ ಈ ಚಿತ್ರಕ್ಕೆ ನವೀನ್ ಪೂಜಾರಿ ಕಥೆ ಇದೆ. ಕಾಮಿಡಿ ಕಿಲಾಡಿ ಅನೀಶ್ ಪೂಜಾರಿ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕ್ಕೆ ಖ್ಯಾತ ಹಿನ್ನೆಲೆಗಾಯಕಿ ಮಾನಸಹೊಳ್ಳ ಸಂಗೀತದ ಇಂಪು ನೀಡುತ್ತಿದ್ದಾರೆ.
ಸಿನೆಮಾಗಳ ಗೀತೆಗೆ ಖ್ಯಾತ ನಿರ್ದೇಶಕ ಕವಿರಾಜ್,ಭರಾಟೆ ನಿರ್ದೇಶಕ ಚೇತನ್,ಸಾಹಿತಿ ಡಾ.ನಾಗೇಂದ್ರಪ್ರಸಾದ್, ಸುಕೇಶ್ ಇವರುಗಳು ಕನಸಿನ ಹಾಡಿಗೆ ಸಾಹಿತ್ಯದ ಸಾಥ್ ನೀಡಿದ್ದಾರೆ. ನಾಯಕನಾಗಿ ಪ್ರಜ್ಞೇಶ್ ಶೆಟ್ಟಿ, ನಾಯಕಿ ಸ್ವಸ್ತಿಕ ಪೂಜಾರಿ , ನವ್ಯ ಪೂಜಾರಿ, ಮಿಂಚಿದ್ದಾರೆ. ಮಾನಸ ಹೊಳ್ಳರವರ ಸಂಗೀತವಿರುವ ಈ ಚಿತ್ರಕ್ಕೆ ಖ್ಯಾತ ಗಾಯಕ ವಿಜಯ್ ಪ್ರಕಾಶ್,ಗಾಯಕಿ ವಾಣಿ ಹರಿಕೃಷ್ಣ ,ಶಶಾಂಕ್, ಶ್ರೀ ಹರ್ಷ ಧ್ವನಿಯಾಗಿದ್ದಾರೆ.