ಬೆಳ್ತಂಗಡಿ: ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಾವಣೆ & ವಿತರಣೆ ಕಾರ್ಯಕ್ರಮ ಬೆಳ್ತಂಗಡಿ ವಲಯದ ಮಲೆಬೆಟ್ಟು ಗ್ರಾಮದಲ್ಲಿ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರತಿ ಹಳ್ಳಿಗಳಲ್ಲಿ ಸರ್ಕಾರಿ ಸೌಲಭ್ಯಗಳ ಮಾಹಿತಿಯನ್ನು ಆಯುಷ್ಮಾನ್ ಕಾರ್ಡ್ ನೋಂದಾವಣಿ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಅನುಗ್ರಹ ಜನಸೇವಾ ಕೇಂದ್ರದ ಸಹಕಾರದೊಂದಿಗೆ ಸುಮಾರು 5 ಸಾವಿರ ಫಲಾನುಭವಿಗಳನ್ನು ತಲುಪುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ನಿರ್ದೇಶಕರಾದ ಸತೀಶ್ ಶೆಟ್ಟಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಬಳಂಜ ಗ್ರಾ.ಪಂ ಗ್ರಾಮ ಲೆಕ್ಕಿಗ ಸಂತೋಷ್, ಆರೋಗ್ಯ ಇಲಾಖಾ ಸಹಾಯಕಿ ಭಾರತಿ, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ರವೀಂದ್ರ, ಶಾಲಾ ಸಹಶಿಕ್ಷಕ ಪ್ರಭಾಕರ್, ಅನುಗ್ರಹ ಜನಸೇವಾ ಕೇಂದ್ರದ ನಿರ್ದೇಶಕ ತಲ್ಹತ್, ಒಕ್ಕೂಟದ ಉಪಾಧ್ಯಕ್ಷ ದೇಜಪ್ಪ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅಶ್ವಿನಿ, ಮೇಲ್ವಿಚಾರಕ ರಾಜೇಶ್, ಸೇವಾಪ್ರತಿನಿಧಿ ಲೀಲಾವತಿ ಉಪಸ್ಥಿತರಿದ್ದರು.
ಮೇಲ್ವಿಚಾರಕ ರಾಜೇಶ್ ಸ್ವಾಗತಿಸಿ, ಲೀಲಾವತಿ ವಂದಿಸಿದರು. ಸಮನ್ವಯಧಿಕಾರಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.