ಬೆಳ್ತಂಗಡಿ : ಬೆಳ್ತಂಗಡಿ ಜ್ಯೂನಿಯರ್ ಕಾಲೇಜ್ ಬಳಿಯ ವಾಸು ಸಪಲ್ಯ(66ವ) ಕೊಲೆ ಮಾಡಿದ ಮಗ ದಯಾನಂದ (38ವ) ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಂಗಳೂರು ನಂತೂರು ಬಳಿ ಉದ್ಯಮಿಯ ಬಳಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದು ಆ.26 ರಂದು ತನ್ನ ಬಳಿ ಹಣ ಇಲ್ಲದೆ ಕೊನೆಗೆ ಸ್ನೇಹಿತನ ಬಳಿ ಹಣವನ್ನು ಸ್ಟೇಟ್ ಬ್ಯಾಂಕ್ ಬಳಿ ಪಡೆಯುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶ್ವಸ್ವಿಯಾಗಿದ್ದಾರೆ.
ಒಬ್ಬನೇ ತಲವಾರಿನಿಂದ ಕೊಲೆ : ಮಂಗಳೂರಲ್ಲಿ ಬಂಧಿಸಿ ಬೆಳ್ತಂಗಡಿ ಠಾಣೆಗೆ ಪೊಲೀಸರು ಕರೆತಂದು ವಿಚಾರಣೆ ನಡೆಸಿದಾಗ ತಾನೂ ಒಬ್ಬನೇ ಕೊಲೆ ಮಾಡಿರುವುದು ಬೇರೆ ಯಾರು ಈ ಘಟನೆಯಲ್ಲಿ ಭಾಗಿಯಾಗಿಲ್ಲ ಅಲ್ಲದೆ ಸ್ಥಳೀಯ ಒಬ್ಬರಿಂದ ಕೆಲಸಮಯದ ಹಿಂದೆ ತಲವಾರು ಮಾಡಿಸಿಕೊಂಡಿದ್ದೇನೆಂದು ತಪ್ಪೋಪ್ಪಿಕೊಂಡಿದ್ದಾನೆ.
ಬಂಧನಕ್ಕೆ ಆರೋಪಿ ಸ್ನೇಹಿತರು ಸಹಾಯ: ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸರು ಆತನ ಮೊಬೈನ್ ನಂಬರ್ ನ ಆಧಾರದಲ್ಲಿ ಆತನ ಸ್ನೇಹಿತರ ಬಗ್ಗೆ ಮಾಹಿತಿ ಕಲೆ ಹಾಕಿ ಸಿಬ್ಬಂದಿಗಳಾದ ಇಬ್ರಾಹಿಂ ಗರ್ಡಾಡಿ , ವೆಂಕಟೇಶ್@ವೆಂಕಿ, ಲತೀಫ್ ಮಂಗಳೂರು ತೆರಳಿ ಸ್ನೇಹತ ವಿಚಾರಣೆ ನಡೆಸಿದರು ಆತ ಬಂದು ಹಣ ಕೇಳಿ ಹೋಗಿದ್ದ ಬಗ್ಗೆ ಮಾಹಿತಿ ನೀಡಿದ್ದರು ಅದರಲ್ಲಿ ಭರತ್ ಹಾಗೂ ಪುನೀತ್ ಪೊಲೀಸರ ಜೊತೆ ಇದ್ದು ಪತ್ತೆಗೆ ಸಹಾಯ ನೀಡಿದ್ದರಿಂದ ಆರೋಪಿ ದಯಾನಂದನ ಬಂಧನಕ್ಕೆ ಸಹಕಾರವಾಗಿದೆ.