ಕಾಳಜಿ ರಿಲೀಫ್ ಫಂಡ್‌ನಲ್ಲಿ 2 ಕೋಟಿ 59 ಲಕ್ಷ ರೂ. ಇದೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶಾಸಕರು ಮಾಡಿದ ಸಮಿತಿಯಲ್ಲ ; ಸಮಾನ ಮನಸ್ಕರ ಸಮಿತಿ -ಕಾರ್ಯದರ್ಶಿ ಬಿ.ಕೆ  ಧನಂಜಯ ರಾವ್ ಹೇಳಿಕೆ

ಬೆಳ್ತಂಗಡಿ: ಕಾಳಜಿ ರಿಲೀಫ್ ಫಂಡ್ ಶಾಸಕರ ಸಮಿತಿ ಎಂದು ಯಾರೂ ತಿಳಿಯಬಾರದು. ಇದು ಬೆಳ್ತಂಗಡಿ ತಾಲೂಕಿನ ಸಮಾನ ಮನಸ್ಕರು ಜಾತಿ, ಧರ್ಮ, ಪಕ್ಷಬೇಧ ಮರೆತು ಸೇರಿಕೊಂಡು ಮಾಡಿರುವ ಸಮಿತಿ. ಈ ಸಮಿತಿಯಲ್ಲಿ 2 ಕೋಟಿ 59 ಲಕ್ಷ ರೂ ಸಂಗ್ರಹವಾಗಿದ್ದು ಅದನ್ನು ಮನೆ ಕಳೆದುಕೊಂಡು ಸಂಕಷ್ಟದಲ್ಲಿದ್ದವರಿಗೆ ಶೀಘ್ರದಲ್ಲೇ ಜಿಲ್ಲಾಧಿಕಾರಿ ಒಪ್ಪಿಗೆ ಪಡೆದು ಹಂಚಲಾಗುತ್ತದೆ ಎಂದು ಕಾಳಜಿ ರಿಲೀಫ್ ಫಂಡ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಕೆ  ಧನಂಜಯ ರಾವ್ ಹೇಳಿದರು.

ಆ.26ರಂದು ಬೆಳ್ತಂಗಡಿ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಳಜಿ ರಿಲೀಫ್ ಫಂಡ್ ಸಮಿತಿಯವರು ಸಮಿತಿಯ ಉದ್ದೇಶ ಹಾಗೂ ಸಂಗ್ರಹವಾಗಿರುವ ಹಣದ ಕುರಿತು ವಿವರ ನೀಡಿದರು. “ಕಳೆದ ಬಾರಿ ನೆರೆ ಪ್ರವಾಹ ಬಂದಿರುವ ಸಂದರ್ಭದಲ್ಲಿ ಮನೆ ಕಳೆದು ಕೊಂಡವರಿಗೆ ಶಾಶ್ವತ ನೆಲೆ ಆಗಬೇಕು ಜನರ ಕಷ್ಟಕ್ಕೆ ಆರ್ಥಿಕವಾಗಿ ಸ್ಪಂದಿಸಬೇಕೆನ್ನುವ ನಿಟ್ಟಿನಲ್ಲಿ ನಾವು ಚರ್ಚಿಸಿದ ವಿಚಾರ ಶಾಸಕರ ಗಮನಕ್ಕೆ ಬಂದು ನಮ್ಮ ಉದ್ದೇಶ ಒಳ್ಳೆಯದಿದ್ದುದರಿಂದ ಅವರು ಕೂಡಾ ಸೇರುವುದಾಗಿ ಹೇಳಿದರು. ಈ ಕ್ಷೇತ್ರದ ಶಾಸಕರಾದುದರಿಂದ ಅವರನ್ನೇ ಸಮಿತಿಯ ಅಧ್ಯಕ್ಷರನ್ನಾಗಿ ನಾವೆಲ್ಲ ಸೇರಿ ಮಾಡಿರುತ್ತೇವೆ ಎಂದು ಹೇಳಿದರು.

ಈ ಸಮಿತಿಗೆ ಕಾಳಜಿ ಎಂದು ಹೆಸರಿಟ್ಟ ಬಳಿಕ ಆ ಹೆಸರಿನಲ್ಲಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಅಕೌಂಟ್ ತೆರೆದಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ನೀಡಿ ನಮ್ಮ ಉದ್ದೇಶ ತಿಳಿಸಿದ್ದರಿಂದ ದೊಡ್ಡ ಪ್ರಮಾಣದಲ್ಲಿ ಸಹಕಾರ ದೊರೆತಿದೆ. ಶಾಸಕರು ಅವರ ಸಂಪರ್ಕದಲ್ಲಿದ್ದವರಲ್ಲಿ, ನಾವು ಕೂಡಾ ನಮ್ಮ ಸಂಪರ್ಕದಲ್ಲಿದ್ದವರಲ್ಲಿ ಈ ವಿಷಯ ತಿಳಿಸಿದಾಗ ಎಲ್ಲರೂ ಸಹಕಾರ ನೀಡಿದ್ದಾರೆ. ಈಗಲೂ ಹಣ ಬರುತ್ತಿದೆ. ಅದೆಲ್ಲವೂ ನಮ್ಮ ಅಕೌಂಟ್‌ನಲ್ಲಿದೆ ಎಂದು ಹೇಳಿದರು.

ವಿಳಂಬ ಆಗಿದೆ :ಸರಕಾರ ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 289 ಮನೆಯ ಪ್ರವಾಹದಿಂದ ಹಾನಿಯಾಗಿರುವ ವರದಿಯಲ್ಲಿ ಗುರಿತಿಸಿತಲ್ಲದೆ, ಅದರಲ್ಲಿ 203 ಎ ಕೆಟಗೆರಿ, 56 ಬಿ ಹಾಗೂ 30 ಮನೆಗಳು ಸಿ ಕೆಟಗೆರಿ ಎಂದು ನಿರ್ಧರಿಸಲ್ಪಟ್ಟಿತು. ಪೂರ್ತಿ ಹಾನಿಯಾದ 303 ಮನೆಯವರಿಗೆ 5 ಲಕ್ಷದ ಪರಿಹಾರ ವಿತರಣೆಯ ಘೋಷಣೆ ಆಯಿತು. ಹೆಚ್ಚಿನವರಿಗೆ 1 ಲಕ್ಷ ಬಂದಿತ್ತಾದರೂ ಅದರಲ್ಲಿ ಕೇವಲ 18 ಮಂದಿ ಮಾತ್ರ ಕೆಲಸ ಆರಂಭಿಸಿದರು. ಯಾರು ಮನೆಕಟ್ಟಲು ಆರಂಭ ಮಾಡುತ್ತಾರೋ ಆರ್ಥಿಕ ಸಂಕಷ್ಟ ಎದುರಿಸುತ್ತಾರೋ ಅವರಿಗೆ ನಾವು ಸಂಗ್ರಹಿಸಿದ ಹಣ ಸಂದಾಯ ಆಗಬೇಕಿದ್ದರಿಂದ ಹಾಗೂ ಕೊರೊನಾ ಲಾಕ್‌ಡೌನ್ ನಿಂದಾಗಿ ಹಣ ಹಂಚಿಕೆಗೆ ಸ್ವಲ್ಪ ಡಿಲೇ ಆಯಿತು ಅವರು ಸ್ಪಷ್ಟ ಪಡಿಸಿದರು.

2 ಕೋಟಿ 59 ಲಕ್ಷ; ಮಾಜಿ ಶಾಸಕ ವಸಂತ ಬಂಗೇರರು ರಿಲೀಫ್ ಫಂಡ್‌ನ ಹಣದ ಲೆಕ್ಕ ಕೇಳುತ್ತಿದ್ದಾರೆ ಇದನ್ನು ನಾವು ಸ್ವಾಗತಿಸುತ್ತೇವೆ. ದಾನಿಗಳು ಒಟ್ಟು ಸೇರಿ ಸದ್ಚಿಂತನೆಯಿಂದ ಸಂಗ್ರಹಿಸಿದ ಈ ಹಣದ ಲೆಕ್ಕವನ್ನು ಸಮಾಜಕ್ಕೆ ನೀಡುವುದು ನಮ್ಮ ಕರ್ತವ್ಯ ಎಂದು ಹೇಳಿದ ಧನಂಜಯರು ಈಗ ನಮ್ಮ ಬ್ಯಾಂಕ್ ಖಾತೆಗೆ ನಗದು ರೂಪದಲ್ಲಿ ರೂ.25 ಲಕ್ಷದ 44 ಸಾವಿರ 180 ರೂ ಬಂದಿದ್ದರೆ ಚೆಕ್, ಡಿಡಿ ಇನ್ನಿತರವಾಗಿ ರೂ.2 ಕೋಟಿ, 27 ಲಕ್ಷ, 62 ಸಾವಿರದ 785 ರೂ ಇದೆ. ಈ ಮೊತ್ತಕ್ಕೆ 5 ಲಕ್ಷದ 97 ಸಾವಿರದ 538ಬಡ್ಡಿ ಬಂದಿದ್ದು ಈಗ ಒಟ್ಟು 2 ಕೋಟಿ 59 ಲಕ್ಷದ 4ಸಾವಿರದ 503 ರೂ ಇದೆ ಎಂದು ಅವರು ವಿವರ ನೀಡಿದ ಅವರು ಈ ಅಕೌಂಟ್‌ನಿಂದ ಇದುವರೆಗೆ ಸೇವಾ ಶುಲ್ಕವೆಂದು 39 ರೂ ಖರ್ಚಾಗಿದೆ ಎಂದು ಹೇಳಿದರು

ಬಲವಂತವಾಗಿ ಸಂಗ್ರಹಿಸಲಾಗಿಲ್ಲ: ಕಾಳಜಿ ರಿಲೀಫ್ ಫಂಡ್ ಹೆಸರಿನಲ್ಲಿ ಸಹಕಾರಿ ಸಂಘಗಳಿಂದ ಬಲವಂತವಾಗಿ ಹಣ ಸಂಗ್ರಹವಾಗಿದೆ ಎಂಬ ಮಾಜಿ ಶಾಸಕರ ಆರೋಪ ಮತ್ತು ತನಿಖೆಗೆ ಸಿ.ಎಂ.ಗೆ ದೂರು ನೀಡಿರುವ ಕುರಿತು ಪತ್ರಕರ್ತರು ಪಶ್ನಿಸಿದಾಗ, “ಖಂಡಿತವಾಗಿಯೂ ಬಲವಂತವಾಗಿ ಯಾರಿಂದಲೂ ಹಣ ಸಂಗ್ರಹಿಸಿಲ್ಲ. ನಮ್ಮ ವಿಚಾರಗಳನ್ನು ಮುಂದಿಟ್ಟಾಗ ಅವರೆಲ್ಲ ಆಡಳಿತ ಮಂಡಳಿಯಲ್ಲಿ ಚರ್ಚಿಸಿಯೇ ಹಣ ನೀಡಿದ್ದಾರೆ. ವಸಂತ ಬಂಗೇರರು ಹಿರಿಯರು ಅವರು ಪ್ರಶ್ನೆ ಮಾಡಿದ್ದಾರೆ. ನಾವು ಉತ್ತರ ಕೊಟ್ಟಿದ್ದೇವೆ. ಅವರ ಮಾರ್ಗದರ್ಶನ ನಮಗೆ ಬೇಕು ಎಂದು ಹೇಳಿದರು. ಅಲ್ಲದೆ 21 ಸಹಕಾರಿಸಂಘಗಳಿಂದ ಸಂಗ್ರಹ ಮಾಡಲಾಗಿರುವ ಹಣದ ವಿವರವನ್ನು ಮುಂದಿಟ್ಟರು. ಇದು ಕಾಳಜಿಯಲ್ಲಿ ಸಾರ್ವಜನಿಕರ ಹಣ ಇರುವುದರಿಂದ ಯಾರು ಯಾವಾಗ ಬೇಕಾದರೂ ಲೆಕ್ಕ ಕೇಳ ಬಹುದು. ರಶಶೀದಿ ನೋಡಬಹುದು. ಅವರಿಗೆ ಅದರ ಲೆಕ್ಕ ಕೊಡುವುದು ನಮ್ಮ ಧರ್ಮ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.